ಬೆಂಗಳೂರು: ಚಿನ್ನ ಮತ್ತು ಬೆಳ್ಳಿಯ ಬೆಲೆ ಪ್ರತಿನಿತ್ಯ ಏರುಪೇರಾಗುತ್ತದೆ. ಪ್ರತಿನಿತ್ಯದ ಬೆಲೆ ನೋಡಿಯೇ ಜನ ಚಿನ್ನ ಖರೀದಿ ಮಾಡುತ್ತಾರೆ. ಹಾಗಾದರೆ ಇಂದು ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ? ಇಲ್ಲಿದೆ ಮಾಹಿತಿ.
ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) 48,600 ರೂ. ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೋಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ.49,408, ರೂ. 48,600, ರೂ. 48,600 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 48,600 ರೂ. ಆಗಿದೆ.
ಇನ್ನು ಬೆಂಗಳೂರಿನಲ್ಲಿ 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) ಹತ್ತು ಗ್ರಾಂಗೆ 53,020 ರೂ. ನಿಗದಿಯಾಗಿದೆ. ಬೆಂಗಳೂರಿನಲ್ಲಿ 1ಕೆಜಿ ಬೆಳ್ಳಿ ದರ 72,300 ರೂ.ಗಳಾಗಿದೆ. ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ 72,300 ಆಗಿದ್ದರೆ, ದೆಹಲಿಯಲ್ಲಿ 67,700 ಮುಂಬೈನಲ್ಲಿ 67,700 ಹಾಗೂ ಕೋಲ್ಕತ್ತಾದಲ್ಲೂ ರೂ. 67,700 ಗಳಾಗಿದೆ.
PublicNext
12/04/2022 08:33 am