ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಸದ್ಯಕ್ಕೆ ನಿಲ್ಲೋ ಹಾಗೆ ಕಾಣುತ್ತಿಲ್ಲ. ದಿನೇ ದಿನೇ ಇದರ ಏರಿಕೆ ಹೆಚ್ಚಗುತ್ತಲೇ ಇದೆ ಹೊರತು, ಇಳಿಯು ಲಕ್ಷಣಗಳು ಸದ್ಯಕಂತೂ ಕಾಣ್ತಾನೇ ಇಲ್ಲ.
ಕಳೆದ ಮಾರ್ಚ್-22 ರಿಂದ ಶುರು ಆಗಿರೋ ಪೆಟ್ರೋಲ್-ಡೀಸೆಲ್ ದರ ಏರಿಕೆ 80 ಪೈಸೆಯಂತೆ ಏರಿಕೆ ಕಂಡಿದ್ದು, ಈಗ ಒಟ್ಟು ಇಲ್ಲಿವರೆಗೂ 8 ರೂಪಾಯಿ ಏರಿಕೆ ಕಂಡಿದೆ.
ಕೇವಲ 13 ದಿನದಲ್ಲಿ ಇಷ್ಟೊಂದು ಏರಿಕೆ ಆಗಿರೋದ್ರಿಂದ ಜನ ಸಾಮಾನ್ಯ ವಾಹನ ಸವಾರರ ಮೇಲೆ ನಿಜಕ್ಕೂ ಇದು ಹೊರ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲೆ ದರ ಏರಿಕೆ ಆಗಿರೋದ್ರಿಂದ ಇಷ್ಟೆಲ್ಲ ಏರಿಕೆ ಕರ್ನಾಟಕ ಸೇರಿದಂತೆ ಎಲ್ಲೆಡೆ ಆಗಿದೆ.
PublicNext
04/04/2022 07:46 am