ದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಪ್ರತಿ ಲೀ ಪೆಟ್ರೋಲ್ ಮತ್ತು ಡೀಸೆಲ್ ಗೆ 80 ಪೈಸೆ ಹೆಚ್ಚಾಗಿದೆ. ಇದು ಇದೇ ವಾರದಲ್ಲಿ 4ನೇ ಬಾರಿ ಏರಿಕೆಯಾದ ಬೆಲೆ.
ಇನ್ನು 80 ಪೈಸೆ ಬೆಲೆ ಏರಿಕೆ ಮೂಲಕ 1 ಲೀ. ಪೆಟ್ರೋಲ್ ಗೆ 98.61 ರೂ. ಡೀಸೆಲ್ ಲೀ.ಗೆ 89.87 ರೂ. ತಲುಪಿದೆ.
ಮುಂಬೈನಲ್ಲಿ ಪೆಟ್ರೋಲ್ ಲೀ.ಗೆ 84 ಪೈಸೆ ಹೆಚ್ಚಳವಾಗಿ 113.35 ರೂ, ಡೀಸೆಲ್ 85 ಪೈಸೆ ಏರಿಕೆಯೊಂದಿಗೆ ಲೀ.ಗೆ 97.55 ರೂ ತಲುಪಿದೆ.
ಬೆಂಗಳೂರಿನಲ್ಲಿ ಲೀ.ಪೆಟ್ರೋಲ್ ಗೆ 82 ಪೈಸೆ ಹೆಚ್ಚಳದೊಂದಿಗೆ ಲೀ.103.93 ರೂ. ಡೀಸೆಲ್ ಲೀ.ಗೆ 77 ಪೈಸೆ ಹೆಚ್ಚಳದೊಂದಿಗೆ 88.14 ರೂ. ಆಗಿದೆ.
PublicNext
26/03/2022 08:13 am