ನವದೆಹಲಿ: ಏರ್ ಇಂಡಿಯಾದ ಅಧ್ಯಕ್ಷರಾಗಿ ನಟರಾಜನ್ ಚಂದ್ರಶೇಖರನ ಅವರನ್ನು ಟಾಟಾ ಗ್ರೂಪ್ ಘೋಷಿಸಿದ್ದು, ಅವರ ನೇಮಕಾತಿಯನ್ನು ಮಂಡಳಿಯು ಸೋಮವಾರ ಖಚಿತಪಡಿಸಿದೆ.
ಚಂದ್ರಶೇಖರನ್ ಅವರು ಟಾಟಾ ಸನ್ಸ್‌ನ ಅಧ್ಯಕ್ಷರಾಗಿದ್ದಾರೆ. ಹಿಡುವಳಿ ಕಂಪನಿ ಮತ್ತು 100ಕ್ಕೂ ಹೆಚ್ಚು ಟಾಟಾ ಆಪರೇಟಿಂಗ್ ಕಂಪನಿಗಳ ಪ್ರವರ್ತಕರಾಗಿದ್ದಾರೆ. 2016ರ ಅಕ್ಟೋಬರ್‌ನಲ್ಲಿ ಟಾಟಾ ಸನ್ಸ್ ಮಂಡಳಿಗೆ ಸೇರಿದ್ದ ಚಂದ್ರಶೇಖರನ್ ಅವರು 2017ರ ಜನವರಿಯಲ್ಲಿ ಅಧ್ಯಕ್ಷರಾಗಿ ನೇಮಕಗೊಂಡರು.
ಟಾಟಾ ಗ್ರೂಪ್ ಈ ಹಿಂದೆ ಟರ್ಕಿಯ ಇಲ್ಕರ್ ಐಸಿ ಅವರನ್ನು ಏರ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಎಂದು ಘೋಷಿಸಿತ್ತು. ಆದರೆ ಆ ನೇಮಕಾತಿಯು ಭಾರತದಲ್ಲಿ ಸಾಕಷ್ಟು ವಿವಾದವನ್ನು ಹುಟ್ಟುಹಾಕಿತ್ತು. ಇದರ ಪರಿಣಾಮವಾಗಿ ಟಾಟಾದ ಏರ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಲು ಟರ್ಕಿಯ ಇಲ್ಕರ್ ಐಸಿ ನಿರಾಕರಿಸಿದ್ದರು.
PublicNext
14/03/2022 08:11 pm