ಕೀವ್: ರಷ್ಯಾ ದೇಶದ ಟೈಮ್ ಚೆನ್ನಾಗಿಲ್ಲ ಬಿಡಿ. ವಿಶ್ವದ ದೊಡ್ಡಣ್ಣ ಸಿಟ್ಟಾಗಿದ್ದಾರೆ. ಇತರ ದೇಶಗಳು ರೊಚ್ಚಿಗೆದ್ದಿವೆ. ಇದರ ಮಧ್ಯೆ ಮೆಕ್‌ಡೋನಾಲ್ಡ್ ಕಂಪನಿಯು ರಷ್ಯಾ ದೇಶದಲ್ಲಿದ್ದ 850 ರೆಸ್ಟೋರೆಂಟ್‌ಗಳನ್ನ ತಾತ್ಕಾಲಿಕವಾಗಿ ಕ್ಲೋಸ್ ಮಾಡಲು ನಿರ್ಧರಿಸಿದೆ.
ರಷ್ಯಾದಲ್ಲಿರೋ ದೈತ್ಯ ಬರ್ಗರ್ ಕಂಪನಿಯು ನಮ್ಮ ಮೆಕ್‌ಡೋನಾಲ್ಡ್ ಬ್ರ್ಯಾಂಡ್‌ನ ಕಡೆಯಿಂದ 62,000 ಉದ್ಯೋಗಿಗಳಿಗೆ ವೇತನ ಪಾವತಿಸುತ್ತದೆ ಎಂದು ಮೆಕ್‌ಡೋನಾಲ್ಡ್ ಕಂಪನಿ ಹೇಳಿದೆ.
ಕಂಪನಿಯ ಅಧ್ಯಕ್ಷ ಮತ್ತು ಸಿಇಒ ಕ್ರಿಸ್ ಕೆಂಪ್‌ಕಿನ್ಸ್ಕಿ ಸದ್ಯಕ್ಕೆ ರಷ್ಯಾದ ರೆಸ್ಟೋರೆಂಟ್‌ಗಳನ್ನ ಮುಚ್ಚುತ್ತಿದ್ದೇವೆ. ಈಗ ಅದೇ ನಿರ್ಧಾರ ಸರಿ ಅಂತಲೇ ಉದ್ಯೋಗಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
PublicNext
09/03/2022 11:18 am