ಬೆಂಗಳೂರು: ದೇಶದಲ್ಲಿ ಕಳೆದ ಎರಡು ದಿನಗಳಿಂದ ಚಿನ್ನದ ದರ ಯಥಾಸ್ಥಿತಿ ಕಾಯ್ದುಕೊಂಡಿದೆ. ಆದರೆ ಬೆಳ್ಳಿಯ ದರ ಇಂದು (ಒಂದೇ ದಿನದಲ್ಲಿ) 1,000 ರೂ. ಕುಸಿತ ಕಂಡಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ನಿರ್ಣಾಯಕವಾಗುತ್ತದೆ.
ಚಿನ್ನದ ಬೆಲೆಯು ದಾಖಲೆ ಬೆಲೆಯನ್ನು ತಲುಪಿದ್ದು, 2 ದಿನಗಳ ಹಿಂದೆ ಭಾರತದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 48,400 ರೂ. ಇದ್ದುದು ನಿನ್ನೆ (ಮಂಗಳವಾರ)ದಿಂದ 49,400 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 52,800 ರೂ. ಇದ್ದುದು 53,890 ರೂ. ಆಗಿದೆ.
ಹಲವು ರಾಜ್ಯಗಳಲ್ಲಿ ಬೆಳ್ಳಿಯ ಬೆಲೆ 1 ಕೆಜಿಗೆ 75,000 ದಾಟುವ ಮೂಲಕ ದಾಖಲೆ ನಿರ್ಮಿಸಿದೆ. ಇನ್ನೊಂದೆಡೆ ಬೆಳ್ಳಿಯ ಬೆಲೆ ನಿನ್ನೆಗಿಂತಲೂ ಇಂದು 1,000 ರೂ. ಕುಸಿತ ಕಂಡಿದೆ. ಭಾರತದಲ್ಲಿ 1 ಕೆಜಿ ಬೆಳ್ಳಿ ದರ 71,000 ರೂ. ಇದ್ದುದು 70,000 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 74,600 ರೂ, ಮೈಸೂರು- 74,600 ರೂ., ಮಂಗಳೂರು- 74,600 ರೂ., ಮುಂಬೈ- 70,000 ರೂ, ಚೆನ್ನೈ- 74,600 ರೂ, ದೆಹಲಿ- 70,000 ರೂ, ಹೈದರಾಬಾದ್- 74,600 ರೂ, ಕೊಲ್ಕತ್ತಾ- 70,000 ರೂ. ಇದೆ.
PublicNext
09/03/2022 10:39 am