ಬೆಂಗಳೂರು: ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧವು ಭಾರತದ ಷೇರುಪೇಟೆ ಮೇಲೆ ಪರಿಣಾಮ ಬೀರುತ್ತಿದೆ. ದೇಶದಲ್ಲಿಂದು ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಸಹ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಭಾರತದಲ್ಲಿ ನಿನ್ನೆ ಭಾರತದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 47,300 ರೂ. ಇದ್ದದ್ದು ಇಂದು 47,700 ರೂ. ಆಗಿದೆ. ಹಾಗೇ 24 ಕ್ಯಾರೆಟ್ ಚಿನ್ನದ ಬೆಲೆ 51,600 ರೂ. ಇದ್ದದ್ದು 52,040 ರೂ. ಆಗಿದೆ.
ಬೆಂಗಳೂರಿನಲ್ಲಿ ಇಂದು ಚಿನ್ನದ ದರದಲ್ಲಿ ಏರಿಕೆಯಾಗಿದೆ. ಇಂದು 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 52,040 ರೂಪಾಯಿ ಆಗಿದೆ. ಇನ್ನು ಮಂಗಳೂರಿನಲ್ಲಿ 52,040 ರೂಪಾಯಿ ಇದ್ದರೆ, ಮೈಸೂರಿನಲ್ಲೂ ಇದೇ ಬೆಲೆಯಿದೆ. ಇನ್ನು 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ ಬೆಂಗಳೂರಿನಲ್ಲಿ 47,700 ರೂಪಾಯಿ ಆಗಿದೆ.
ಬೆಳ್ಳಿ ಬೆಲೆಯಲ್ಲಿ ನಿನ್ನೆಗಿಂತ ಇಂದು ಕೂಡ ಮತ್ತೆ ಏರಿಕೆಯಾಗಿದೆ. ನಿನ್ನೆಗಿಂತ ಇಂದು 1 ಕೆಜಿ ಬೆಳ್ಳಿಗೆ 700 ರೂ. ಏರಿಕೆಯಾಗಿದೆ. ಭಾರತದಲ್ಲಿ 1 ಕೆಜಿ ಬೆಳ್ಳಿ ದರ 67,300 ರೂ. ಇದ್ದುದು ಇಂದು 68,000 ರೂ. ಆಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿಗೆ 72,500 ರೂಪಾಯಿ ದರವಿದೆ. ಇನ್ನು ಮೈಸೂರು- 72,500 ರೂ. ಹಾಗೂ ಮಂಗಳೂರು- 72,500 ರೂ.ಗೆ ತಲುಪಿದೆ.
PublicNext
05/03/2022 08:16 am