ಮುಂಬೈ: ಉಕ್ರೇನ್ ಮೇಲೆ ರಷ್ಯಾ ಯುದ್ಧ ಘೋಷಣೆ ಮಾಡಿದ ನಂತರದಲ್ಲಿ (ಗುರುವಾರ) ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 2,702 ಅಂಶ ಕುಸಿತ ಕಂಡಿತ್ತು. 2020ರ ಮಾರ್ಚ್ 23ರ ನಂತರ ಸೆನ್ಸೆಕ್ಸ್ ಈ ಪ್ರಮಾಣದ ಕುಸಿತ ಕಂಡಿದ್ದು ಇದೇ ಮೊದಲು. ಇದಾದ ಒಂದು ದಿನದ ನಂತರ ಅಂದ್ರೆ ಇಂದು (ಶುಕ್ರವಾರದ) ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 1,100 ಪಾಯಿಂಟ್‌ಗಳಿಗಿಂತ ಹೆಚ್ಚು ಜಿಗಿತ ಕಂಡಿದೆ.
ಗುರುವಾರ ವಹಿವಾಟಿನ ನಡುವಿನಲ್ಲಿ ಸೆನ್ಸೆಕ್ಸ್ 2,850 ಅಂಶಗಳವರೆಗೂ ಕುಸಿದಿತ್ತು. ದಿನದ ಅಂತ್ಯಕ್ಕೆ 54,529 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತ್ತು. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 815 ಅಂಶ (ಶೇಕಡ 4.78ರಷ್ಟು) ಕುಸಿಯಿತು. 16,247 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತ್ತು.
ಇಂದು ಬೆಳಗ್ಗೆ 10 ಗಂಟೆಗೆ ಸಿಕ್ಕ ಮಾಹಿತಿ ಪ್ರಕಾರ, ಸೆನ್ಸೆಕ್ಸ್ 55,723 ಪಾಯಿಂಟ್ಸ್‌ಇದ್ದರೆ, ನಿಫ್ಟಿ 16,611 ಅಂಕ ಹೊಂದಿದೆ.
PublicNext
25/02/2022 10:17 am