ನವದೆಹಲಿ: ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷದಿಂದಾಗಿ ಭಾರತೀಯ ಷೇರು ಮಾರುಕಟ್ಟೆ ಗುರುವಾರ ತತ್ತರಿಸಿದೆ. ಫೆಬ್ರವರಿ 24ನೇ ತಾರೀಕಿನ ಗುರುವಾರದಂದು ಮಧ್ಯಾಹ್ನದ ಹೊತ್ತಿಗೆ ಸೆನ್ಸೆಕ್ಸ್ 2000 ಪಾಯಿಂಟ್ಸ್ ನೆಲ ಕಚ್ಚಿದ್ದರೆ, ನಿಫ್ಟಿ 600ಕ್ಕೂ ಹೆಚ್ಚು ಪಾಯಿಂಟ್ಸ್ ಕುಸಿದಿದೆ.
ರಷ್ಯಾ ಉಕ್ರೇನ್ ಅನ್ನು ಆಕ್ರಮಿಸಿಕೊಳ್ಳುತ್ತಿರುವುದರಿಂದ ಷೇರು ಮಾರುಕಟ್ಟೆಯಲ್ಲಿ ಈ ಬದಲಾವಣೆಗಳಾಗುತ್ತಿವೆ. ಇದು ಇತಿಹಾಸದಲ್ಲಿಯೇ 10ನೇ ದೊಡ್ಡ ಕುಸಿತವಾಗಿದೆ. ಸೆನ್ಸೆಕ್ಸ್ 2000ಕ್ಕೂ ಹೆಚ್ಚು ಪಾಯಿಂಟ್ಸ್ ಕುಸಿತ 1 ಗಂಟೆಗೂ ಕಡಿಮೆ ಸಮಯದಲ್ಲಿ 8 ಲಕ್ಷ ಕೋಟಿ ನಷ್ಟವಾಗಿದೆ.
PublicNext
24/02/2022 04:40 pm