ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಧು-ವರರಿಗಾಗಿ ಬೆಳ್ಳಿ ಶೂಸ್, ಬೆಲ್ಟ್, ಪರ್ಸ್: ಖರೀದಿಗೆ ಮುಗಿಬಿದ್ದ ಜನ

ಜೋಧಪುರ (ರಾಜಸ್ಥಾನ): ಸದ್ಯ ಮದುವೆಯ ಸೀಜನ್ ಚಿನ್ನ, ಬೆಳ್ಳಿ ಕೊಳ್ಳುವಲ್ಲಿ ಜನ ಬ್ಯಜಿಯಾಗಿದ್ದಾರೆ. ಬೆಲೆ ಎಷ್ಟೇ ಇದ್ದರು ಕೊಳ್ಳುವವರ ಸಂಖ್ಯೆಯೇನು ಕಡಿಮೆಯಾಗಿಲ್ಲ. ಸದ್ಯ ಮಾರುಕಟ್ಟೆಗೆ ವಧು-ವರರಿಗಾಗಿ ಬೆಳ್ಳಿ,ಶೂಸ್,ಬೆಲ್ಟ್,ಪರ್ಸ್ ಲಗ್ಗೆ ಇಟ್ಟಿದ್ದು ಅದನ್ನು ಕೊಳ್ಳಲು ಜನ ಮುಗಿಬಿದ್ದಾರೆ. ರಾಜಸ್ಥಾನದ ಜೋಧಪುರ.

ಇಲ್ಲಿಯ ವ್ಯಾಪಾರಿಯೊಬ್ಬರು ವಧು- ವರರಿಗಾಗಿ ಬೆಳ್ಳಿಯಿಂದ ತಯಾರಿಸಿರುವ ಶೂಸ್, ಪರ್ಸ್, ಬೆಲ್ಟ್ ಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ. ಜೋಧಪುರ ಎಂದರೆ ಇದು ಅದ್ಧೂರಿ ಮದುವೆಗಳ ತಾಣ. ಇದೇ ಕಾರಣಕ್ಕೆ ಇಲ್ಲಿ ಸೆಲೆಬ್ರಿಟಿಗಳಿಂದ ಹಿಡಿದು ಶ್ರೀಮಂತರು ಮದುವೆ ಮಾಡಿಕೊಳ್ಳುತ್ತಾರೆ.

ಪುರುಷರು ಧರಿಸುವ ಬೆಲ್ಟ್ ನಲ್ಲಿ ಹಾಗೂ ಶೂಸ್ ನಲ್ಲಿ 200-300 ಗ್ರಾಂ ಬೆಳ್ಳಿ ಬಳಸಲಾಗಿದ್ದು, ಮೊಬೈಲ್ ಫೋನ್ ಇಟ್ಟುಕೊಳ್ಳಬಹುದಾದ ಪರ್ಸ್ ಗಳಲ್ಲಿ 500 ಗ್ರಾಂ ಬೆಳ್ಳಿ ಬಳಸಲಾಗಿದೆ. ಬೆಲೆ 16ರಿಂದ 17 ಸಾವಿರದವರೆಗೆ ಇದ್ದು, ಪರ್ಸ್ ಬೆಲೆ 30 ಸಾವಿರ ಇದೆ.

ಅಚ್ಚರಿಯ ವಿಷಯವೆಂದರೆ, ಇದು ವಧು-ವರರಿಗೆ ಮಾತ್ರವಲ್ಲದೇ ಮುಂದೆ ಮದುವೆಯಾಗುವ ಯುವತಿ-ಯುವಕರಿಗೂ ತುಂಬಾ ಇಷ್ಟವಾಗಿದ್ದು, ಇದನ್ನು ಕೊಳ್ಳಲು ಮುಗಿಬೀಳುತ್ತಿದ್ದಾರೆ.

Edited By : Nirmala Aralikatti
PublicNext

PublicNext

26/11/2021 12:37 pm

Cinque Terre

28.43 K

Cinque Terre

0