ನವದೆಹಲಿ: ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮುಂದುವರಿದಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಪ್ರತಿ ಲೀಟರ್ ಗೆ 109.53 ರೂ. ಮತ್ತು ಡೀಸೆಲ್ 100.37 ರೂ. ಇನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪ್ರತಿ ಲೀಟರ್ ಗೆ ಕ್ರಮವಾಗಿ 35 ಪೈಸೆಯಷ್ಟು ಏರಿಕೆಯಾಗಿ 105.84 ರೂ. ಮತ್ತು 94.57 ರೂ.ಗೆ ಏರಿಸಲಾಗಿದೆ. ಮುಂಬೈನಲ್ಲಿ, ಪೆಟ್ರೋಲ್ 111.77 ರೂ.ಡೀಸೆಲ್ 102.52 ರೂ.ಗೆ ಏರಿಕೆಯಾಗಿದೆ.
ಕೋಲ್ಕತ್ತಾದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಪ್ರತಿ ಲೀಟರ್ ಗೆ 106.43 ರೂ. ಮತ್ತು 97.68 ರೂ.ಇದೆ. ಹೈದರಾಬಾದ್ ನಲ್ಲಿ ಪೆಟ್ರೋಲ್ 110.09 ರೂ., ಡೀಸೆಲ್ ಬೆಲೆ 103.08 ರೂ. ಆಗಿದೆ.
ಸೆಪ್ಟೆಂಬರ್ ಕೊನೆಯ ವಾರದಲ್ಲಿ ದರ ಪರಿಷ್ಕರಣೆಯಲ್ಲಿ ಮೂರು ವಾರಗಳ ಸುದೀರ್ಘ ವಿರಾಮದ ನಂತರ ಇದು ಪೆಟ್ರೋಲ್ ಬೆಲೆಯಲ್ಲಿ 16 ನೇ ಬಾರಿ ಮತ್ತು ಡೀಸೆಲ್ ಬೆಲೆಯಲ್ಲಿ 19 ನೇ ಬಾರಿಗೆ ಏರಿಕೆಯಾಗಿದೆ.
PublicNext
17/10/2021 09:33 am