ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತದ ಅರ್ಧಕ್ಕಿಂತ ಹೆಚ್ಚು ಆಸ್ತಿ ಶೇ.10ರಷ್ಟು ಅತಿ ಶ್ರೀಮಂತರು ಕೈಯಲ್ಲಿದೆ.!

ನವದೆಹಲಿ: ದೇಶದ ಶೇಕಡ 10ರಷ್ಟು ಅತಿ ಶ್ರೀಮಂತರು ಭಾರತದ ಒಟ್ಟು ಭೌತಿಕ ಹಾಗೂ ಹಣಕಾಸು ಆಸ್ತಿಗಳ ಪೈಕಿ ಅರ್ಧದಷ್ಟನ್ನು ಹೊಂದಿದ್ದಾರೆ ಎಂಬ ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯಿಂದ ಬಹಿರಂಗವಾಗಿದೆ.

ನ್ಯಾಷನಲ್ ಸ್ಯಾಂಪಲ್ ಸರ್ವೆ ನಡೆಸಿದ ಅಖಿಲ ಭಾರತ ಸಾಲ ಮತ್ತು ಹೂಡಿಕೆ ಸಮೀಕ್ಷೆ-2019ರಿಂದ ತಿಳಿದು ಬರುವಂತೆ ದೇಶದ ಶೇಕಡ 10ರಷ್ಟು ಅತಿ ಶ್ರೀಮಂತರ ಕೈಯಲ್ಲಿ ದೇಶದ ಶೇಕಡ 55.7ರಷ್ಟು ನಗರ ಹಾಗೂ ಶೇಕಡ 50.8ರಷ್ಟು ಗ್ರಾಮೀಣ ಆಸ್ತಿಗಳಿವೆ. ಭೂ ಹಿಡುವಳಿ, ಕಟ್ಟಡಗಳು, ಜಾನುವಾರು, ವಾಹನಗಳು ಮತ್ತು ಕಂಪೆನಿಗಳ ಷೇರುಗಳು, ಬ್ಯಾಂಕ್, ಅಂಚೆ ಕಚೇರಿ ಠೇವಣಿಗಳು ಸೇರಿದಂತೆ ಪ್ರತಿ ಕುಟುಂಬಗಳು ಹೊಂದಿರುವ ಆಸ್ತಿಗಳ ಹಣಕಾಸು ಮೌಲ್ಯವನ್ನು ಲೆಕ್ಕಾಚಾರ ಹಾಕಿ ಈ ಅಂದಾಜು ಸಿದ್ಧಪಡಿಸಲಾಗಿದೆ.

2019ರ ಜನವರಿಯಿಂದ ಡಿಸೆಂಬರ್ ನಡುವೆ ಈ ಸಮೀಕ್ಷೆ ನಡೆಸಲಾಗಿತ್ತು. ದೇಶದ ನಗರ ಪ್ರದೇಶಗಳಲ್ಲಿ ವಾಸಿಸುವ ಜನತೆಯ ಭೌತಿಕ ಮತ್ತು ಹಣಕಾಸು ಆಸ್ತಿಯ ಮೌಲ್ಯ 274.6 ಲಕ್ಷ ಕೋಟಿ ರೂ. ಆಗಿದ್ದು, ಈ ಪೈಕಿ ಶೇಕಡ 10ರಷ್ಟು ಶ್ರೀಮಂತರು 139.6 ಲಕ್ಷ ಕೋಟಿಯ ಒಡೆತನ ಹೊಂದಿದ್ದಾರೆ. ಅಂತೆಯೇ ಗ್ರಾಮೀಣ ಪ್ರದೇಶಗಳಲ್ಲಿ ಶೇಕಡ 10ರಷ್ಟು ಅತಿ ಶ್ರೀಮಂತರು ಒಟ್ಟು 238.1 ಲಕ್ಷ ಕೋಟಿ ರೂಪಾಯಿ ಮೌಲ್ಯದ ಆಸ್ತಿಯ ಪೈಕಿ 132.5 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ತಳಹಂತದ ಶೇಕಡ 50ರಷ್ಟು ಮಂದಿ ಕೇವಲ 10.2ರಷ್ಟು ಆಸ್ತಿಯನ್ನು ಗ್ರಾಮೀಣ ಭಾಗದಲ್ಲಿ ಹೊಂದಿದ್ದರೆ, ನಗರ ಪ್ರದೇಶದ ತಳಮಟ್ಟದ ಶೇಕಡ 50ರಷ್ಟು ಜನರ ಕೈಯಲ್ಲಿರುವ ಆಸ್ತಿ ಶೇಕಡ 6.2ರಷ್ಟು ಮಾತ್ರ.

ಕೆಲ ರಾಜ್ಯಗಳಲ್ಲಂತೂ ಈ ಅಂತರ ಗಾಧವಾಗಿದೆ. ಉದಾಹರಣೆಗೆ ದಿಲ್ಲಿಯಲ್ಲಿ ಅಗ್ರ 10 ಶೇ. ಮಂದಿ ಶೇಕಡ 80.8ರಷ್ಟು ಆಸ್ತಿ ಹೊಂದಿದ್ದರೆ, ಕೆಳಮಟ್ಟದ ಶೇಕಡ 50ರಷ್ಟು ಮಂದಿ ಕೇವಲ 2.1 ಶೇ. ಆಸ್ತಿ ಹೊಂದಿದ್ದಾರೆ. ದಿಲ್ಲಿ ಹೊರತುಪಡಿಸಿದರೆ ದೊಡ್ಡ ರಾಜ್ಯಗಳ ಪೈಕಿ ಅತ್ಯಧಿಕ ಅಸಮಾನತೆ ಇರುವುದು ಪಂಜಾಬ್‌ನಲ್ಲಿ. ಇದಲ್ಲಿ ಶೇಕಡ 10ರಷ್ಟು ಶ್ರೀಮಂತರು 65 ಶೇ. ಆಸ್ತಿ ಹೊಂದಿದ್ದರೆ, ಕೆಳಮಟ್ಟದ ಶೇಕಡ 50ರಷ್ಟು ಜನರ ಕೈಯಲ್ಲಿರುವ ಆಸ್ತಿ ಪ್ರಮಾಣ ಕೇವಲ ಶೇಕಡ 5 ಆಗಿದೆ. ಉತ್ತರಾಖಂಡ ಹಾಗೂ ಮಧ್ಯಪ್ರದೇಶದಲ್ಲೂ ಅಂತರ ವ್ಯಾಪಕವಾಗಿದೆ.

Edited By : Vijay Kumar
PublicNext

PublicNext

15/09/2021 10:42 pm

Cinque Terre

48.97 K

Cinque Terre

8

ಸಂಬಂಧಿತ ಸುದ್ದಿ