ಬೆಂಗಳೂರು: ಓಲಾ ಇ ಸ್ಕೂಟರ್, ಆಗಸ್ಟ್ 15ರಂದು ದೇಶದಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಓಲಾಕ್ಯಾಬ್ಸ್ ಸಹ ಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಿಷ್ ಅಗರ್ ವಾಲ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಸ್ವಾತಂತ್ರ್ಯೋತ್ಸವ ದಿನದಂದು ಹೊಸ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಲಗ್ಗೆ ಇರಿಸುತ್ತಿದೆ ಎಂದಿದ್ದಾರೆ.
10 ವಿವಿಧ ಬಣ್ಣಗಳಲ್ಲಿ ಲಭ್ಯವಾಗಲಿದೆ. ಓಲಾ ಕಂಪನಿಯ ವೆಬ್ ಸೈಟ್ ಮೂಲಕ ಆಸಕ್ತರು 499 ಪಾವತಿಸಿ ಪ್ರಿಬುಕ್ ಮಾಡಲು ಅವಕಾಶ ಕಲ್ಪಿಸಿದೆ. ಓಲಾ ಇ ಸ್ಕೂಟರ್ ನ ತಾಂತ್ರಿಕ ವೈಶಿಷ್ಟ್ಯ ಮತ್ತು ಲಭ್ಯತೆ ಕುರಿತು ಮತ್ತಷ್ಟು ಹೆಚ್ಚಿನ ವಿವರವನ್ನು ಶೀಘ್ರದಲ್ಲೇ ಹಂಚಿಕೊಳ್ಳುತ್ತೇವೆ ಎಂದು ಓಲಾ ಸಿಇಒ ಭವಿಷ್ ತಿಳಿಸಿದ್ದಾರೆ.
ಓಲಾ ತಮಿಳುನಾಡು ಫ್ಯೂಚರ್ ಫ್ಯಾಕ್ಟರಿಯಲ್ಲಿ ನೂತನ ಇ ಸ್ಕೂಟರ್ ಉತ್ಪಾದನೆ ಮಾಡಲಾಗುತ್ತದೆ. ವೇಗ, ರೇಂಜ್, ಬೂಟ್ ಸ್ಪೇಸ್ ಮತ್ತು ತಂತ್ರಜ್ಞಾನದ ವಿಚಾರದಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್ ಮುಂಚೂಣಿ ಗುಣಮಟ್ಟದ್ದಾಗಿರುತ್ತದೆ ಎಂದು ಓಲಾ ಹೇಳಿದೆ. ಬೆಲೆ ಕೂಡ ಸ್ಪರ್ಧಾತ್ಮಕವಾಗಿ ಇರಲಿದ್ದು, ವ್ಯಾಪಕವಾಗಿ ಕೈಗೆ ಸಿಗಲಿದೆ.
PublicNext
03/08/2021 07:05 pm