ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜೇಬು ಸುಡುತ್ತಿದೆ ಪೆಟ್ರೋಲ್, ಡೀಸೆಲ್ ದರ : 8 ನೇ ದಿನವೂ ವಾಹನ ಸವಾರರಿಗೆ ಶಾಕ್

ನವದೆಹಲಿ: ತೈಲ ದರ ಏರಿಕೆಗೆ ಗ್ರಾಹಕ ಕಂಗಾಲಾಗಿ ಹೋಗಿದ್ದಾನೆ. ಸತತ 8 ನೇ ದಿನವೂ ದರ ಏರಿಕೆಯಾಗಿದೆ. ಪೈಸೆಗಳ ಲೆಕ್ಕದಲ್ಲಿ ಏರಿಕೆಯಾದ ಪೆಟ್ರೋಲ್ ಮತ್ತು ಡೀಸೆಲ್ ದರ 100 ರೂಪಾಯಿ ಸನಿಹಕ್ಕೆ ತಲುಪಿದೆ.

ಇಂದು ಪೆಟ್ರೋಲ್ ಪ್ರತಿ ಲೀಟರ್ ಗೆ 30 ಪೈಸೆ ಮತ್ತು ಡೀಸೆಲ್ 35 ಪೈಸೆಯಷ್ಟು ಹೆಚ್ಚಳವಾಗಿದೆ. ಇದರೊಂದಿಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಲೀಟರಿಗೆ 89.29 ರೂ., ಡೀಸೆಲ್ ಲೀಟರಿಗೆ 79.70 ರೂ.ಗೆ ಏರಿಕೆಯಾಗಿದೆ. ವ್ಯಾಟ್ ತೆರಿಗೆ, ಸಾಗಣೆ ವೆಚ್ಚ ಆಧರಿಸಿ ಆಯಾ ರಾಜ್ಯದಲ್ಲಿ ತೈಲ ದರದಲ್ಲಿ ವ್ಯತ್ಯಾಸವಿರುತ್ತದೆ.

ಪೆಟ್ರೋಲ್, ಡೀಸೆಲ್, ಜೊತೆಗೆ ಗ್ಯಾಸ್ ಬೆಲೆ ಕೂಡ ಏರಿಕೆಯಾಗಿರುವುದು ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿದೆ.

Edited By : Nirmala Aralikatti
PublicNext

PublicNext

16/02/2021 08:02 am

Cinque Terre

60.08 K

Cinque Terre

10

ಸಂಬಂಧಿತ ಸುದ್ದಿ