ನವದೆಹಲಿ: ಕಳೆದ ಕೆಲ ದಿನಗಳಿಂದ ಪ್ರತಿದಿನವೂ ಪೆಟ್ರೋಲ್ ಮತ್ತು ಡೀಸೆಲ್ ದರ ಪರಿಷ್ಕರಣೆ ಮಾಡಲಾಗುತ್ತಿದೆ. ಆದರೆ ಈ ವಾರದಲ್ಲಿ 4 ಬಾರಿ ಹೆಚ್ಚಳವಾಗಿದ್ದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಶನಿವಾರ ದಾಖಲೆಯ ಮಟ್ಟಕ್ಕೆ ಏರಿದೆ.
ನವದೆಹಲಿಯಲ್ಲಿ ಇಂದು ಪ್ರತಿ ಲೀಟರ್ ಪೆಟ್ರೋಲ್ ಬೆಲೆ 85.70 ರೂ. ಇದೆ. ಮುಂಬೈನಲ್ಲಿ 92.28 ರೂ, ಜೈಪುರದಲ್ಲಿ 93.22 ರೂ, ಬೆಂಗಳೂರಿನಲ್ಲಿ 88.59 ರೂ, ಹೈದರಾಬಾದ್ನಲ್ಲಿ 89.15 ರೂ, ತಿರುವನಂತಪುರದಲ್ಲಿ 87.87 ರೂ, ಚೆನ್ನೈನಲ್ಲಿ 88.29 ರೂ, ಕೋಲ್ಕತ್ತಾದಲ್ಲಿ 87.11 ರೂ. ಇದೆ. ಬೆಂಗಳೂರಿನಲ್ಲಿ ಕಳೆದೊಂದು ವಾರದಿಂದ ಪೆಟ್ರೋಲ್ ಬೆಲೆಯಲ್ಲಿ ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ.
ಭಾರತದಲ್ಲಿ ಡೀಸೆಲ್ ಬೆಲೆಯಲ್ಲೂ ಏರಿಕೆಯಾಗುತ್ತಲೇ ಇದ್ದು, ಜೈಪುರದಲ್ಲಿ 1 ಲೀಟರ್ ಡೀಸೆಲ್ ಬೆಲೆ 85 ರೂ. ದಾಟಿದೆ. ಚೆನ್ನೈ, ಮುಂಬೈ, ಹೈದರಾಬಾದ್, ಭುವನೇಶ್ವರದಲ್ಲಿ 1 ಲೀಟರ್ ಡೀಸೆಲ್ ಬೆಲೆ 82 ರೂ. ದಾಟಿದೆ. ವಿವಿಧ ನಗರಗಳಲ್ಲಿ ಇಂದಿನ ಡೀಸೆಲ್ ಬೆಲೆ ಹೀಗಿದೆ. ನವದೆಹಲಿಯಲ್ಲಿ ಇಂದು 1 ಲೀಟರ್ ಡೀಸೆಲ್ಗೆ 75.88 ರೂ. ಇದೆ. ಚೆನ್ನೈನಲ್ಲಿ 81.14 ರೂ, ಮುಂಬೈನಲ್ಲಿ 82.66 ರೂ, ಬೆಂಗಳೂರಿನಲ್ಲಿ 80.47 ರೂ, ಹೈದರಾಬಾದ್ನಲ್ಲಿ 82.80 ರೂ. ಇದೆ.
PublicNext
24/01/2021 11:48 am