ಬೆಂಗಳೂರು: ಸ್ವಂತಕ್ಕೊಂದು ಕಾರು ಇರಬೇಕು ಎನ್ನುವುದು ಅನೇಕರ ಆಸೆ. ಆದರೆ ಖರೀದಿಗೆ ಹಾಗೂ ನಿರ್ವಹಣೆ ಕಷ್ಟ ಎಂದು ಅನೇಕರು ಕಾರು ಖರೀದಿಗೆ ಮುಂದಾಗುತ್ತಿಲ್ಲ. ಹೀಗಾಗಿ ಬಾಡಿಗೆ ಪಡೆದು ಕಾರು ಓಡಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಕೊರೊನಾ ಲಾಕ್‌ಡೌನ್ ಬಳಿಕ ಖಾಸಗಿ ಪ್ರಯಾಣಿಕ ವಾಹನಗಳ ಬಳಕೆ ಹೆಚ್ಚಾಗಿದೆ. ಸಾರ್ವಜನಿಕ ಸಾರಿಗೆಯ ಬದಲು ಹೆಚ್ಚಿನ ಜನರು ಖಾಸಗಿ ವಾಹನವನ್ನೇ ಬಯಸುತ್ತಿದ್ದಾರೆ. ಹೀಗಾಗಿ ಬಾಡಿಗೆ ಕಾರು ಖರೀದಿಗೂ ಅವಕಾಶ ಜಾಸ್ತಿಯಾಗಿದೆ.
ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ವಿವಿಧ ನಗರಗಳಲ್ಲಿ ರೆವ್‌ನಂತಹ ಕಂಪನಿಗಳು ಬಾಡಿಗೆಗೆ ಕಾರು ನೀಡುತ್ತಿವೆ. ಇಲ್ಲಿ ದಿನದ ಮಟ್ಟಿಗೆ, ವಾರದ ಮಟ್ಟಿಗೆ ಹಾಗೂ ತಿಂಗಳ ಅವಧಿಗೆ ಬಾಡಿಗೆಗೆ ಪಡೆಯಲು ಅವಕಾಶವಿದೆ. ಸುಮಾರು 36 ತಿಂಗಳವರೆಗೂ ನೀವು ಕಾರು ಬಾಡಿಗೆಗೆ ಪಡೆದುಕೊಳ್ಳಬಹುದು. ಇದಕ್ಕೆ ಯಾವುದೇ ಡೌನ್‌ಪೇಮೆಂಟ್ ಮತ್ತು ರಸ್ತೆ ತೆರಿಗೆ ಇರುವುದಿಲ್ಲ.
ನಿಮ್ಮ ಅಗತ್ಯಕ್ಕೆ ತಕ್ಕಂತೆ ಹ್ಯಾಚ್‌ಬ್ಯಾಕ್, ಸೆಡಾನ್, ಎಸ್‌ಯುವಿ ಮತ್ತು ಕಾಂಪಾಕ್ಟ್ ಎಸ್‌ಯುವಿಯಂತಹ ವಿವಿಧ ಮಾದರಿ ಮತ್ತು ಗಾತ್ರದ ಕಾರುಗಳು ಅಲ್ಲಿ ಸಿಗುತ್ತದೆ. ನಿರ್ವಹಣೆ ಮತ್ತು ಸರ್ವಿಸ್ ಕಿರಿಕಿರಿಯಿಲ್ಲದೆಯೇ ಆಕರ್ಷಕ ಕಾರು ಹೊಂದಲು ಇದು ಅವಕಾಶ ಕಲ್ಪಿಸುತ್ತದೆ. ಜತೆಗೆ ಬಾಡಿಗೆಗೆ ಕಾರು ಒದಗಿಸುವ ರೆವ್‌ನಂತಹ ಕಂಪನಿಗಳು ಸ್ಯಾನಿಟೈಸ್‌ನಂತಹ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಕೈಗೊಂಡು, ಗ್ರಾಹಕರ ಮನೆಬಾಗಿಲಿಗೆ ಕಾರು ಪೂರೈಸುತ್ತಿವೆ.
PublicNext
14/01/2021 03:01 pm