ಟ್ವಿಟರ್ ನಲ್ಲಿ ಅದೆಷ್ಟು ನಕಲಿ ಖಾತೆಗಳಿವೆಯೋ ಏನೋ. ಆದರೆ, ಈಗ ಪ್ರತಿ ದಿನ ಬರೋಬ್ಬರಿ 10 ಲಕ್ಷ ನಕಲಿ ಖಾತೆಗಳನ್ನ ಡಿಲೀಟ್ ಮಾಡಲಾಗುತ್ತಿದೆ ಎಂದು ಟ್ವಿಟರ್ ಹೇಳಿದೆ.
ಎಲಾನ್ ಮಸ್ಕ್ ಈ ಹಿಂದೇ ನಕಲಿ ಖಾತೆಯ ಬಗ್ಗೆ ಆಕ್ಷೇಪ ಎತ್ತಿದ್ದರು. ಅದನ್ನ ಧೃಡಿಪಡಿಸುವಂತೇನೆ ಈ ಬೆಳವಣಿಗೆ ಇದೆ. ಸಕ್ರಿಯ ಬಳಕೆದಾರರಲ್ಲಿ ಅಟೋಮ್ಯಾಟಿಕ್ ಸ್ಪ್ಯಾಮ್ ಖಾತೆಗಳ ಪ್ರಮಾಣ ಶೇಕಡ-5% ರಷ್ಟು ಕಡಿಮೆ ಆಗದೇ ಇದ್ದರೇ, ಟ್ವಿಟರ್ ಖರೀದಿ ಪ್ರಕ್ರಿಯೆ ನಿಲ್ಲಿಸೋದಾಗಿಯೇ ಎಲಾನ್ ಮಸ್ಕ್ ಹೇಳಿದ್ದರು.
ಇದಕ್ಕೆ ಸಂಬಂಧಿಸಿದಂತೆ,ಸ್ಪ್ಯಾಮ್ ಖಾತೆಗಳ ಸಂಖ್ಯೆ ಒಟ್ಟು ಬಳಕೆದಾರರಗಿಂತಲೂ ಶೇಕಡ 5% ರಷ್ಟು ಕಡಿಮೆ ಇದೆ ಅಂತಲೇ ಟ್ವಿಟರ್ ಹೇಳಿತ್ತು.
PublicNext
08/07/2022 02:55 pm