ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಾದಗಿರಿ: ಸುರಪುರ ತಾಲ್ಲೂಕಿನಲ್ಲಿ ನಕಲಿ ರಸಗೊಬ್ಬರ ಮಾರಾಟ- ಕರವೇ ಖಂಡನೆ, ಅಂಗಡಿ ಸೀಜ್

ಜಿಲ್ಲೆಯ ಸುರಪುರ ತಾಲ್ಲೂಕಿನಾದ್ಯಂತ ನಗರ ಮತ್ತು ಗ್ರಾಮೀಣ ಪ್ರದೇಶದ ಕೆಲವು ರಸಗೊಬ್ಬರ ಅಂಗಡಿಗಳ ಮಾಲೀಕರು ರೈತರಿಗೆ ಅವಧಿ ಮುಗಿದ ರಸಗೊಬ್ಬರ ಹಾಗೂ ಮರಳು, ಮಣ್ಣು ಮಿಶ್ರಿತಗೊಂಡ ನಕಲಿ ರಸಗೊಬ್ಬರ ಮಾರಾಟ ಮಾಡುತ್ತಿದ್ದಾರೆ. ಅಂತವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕರವೇ ತಾಲ್ಲೂಕು ಅಧ್ಯಕ್ಷ ವೆಂಕಟೇಶ ನಾಯಕ ಬೈರಿಮಡ್ಡಿ ಆಗ್ರಹಿಸಿದ್ದಾರೆ.

ತಾಲ್ಲೂಕಿನ ಬಾದ್ಯಾಪೂರ ಗ್ರಾಮದ ಶ್ರೀ ಮಂಜುನಾಥ ಕೃಷಿ ಕೇಂದ್ರದಲ್ಲಿ ಇಂದು ನಕಲಿ ರಸಗೊಬ್ಬರ ಮಾರಾಟ ಮಾಡುತ್ತಿರುವದನ್ನು ಖಂಡಿಸಿ ಕರವೇ ಗ್ರಾಮ ಘಟಕದಿಂದ ರಸಗೊಬ್ಬರ ಮಳಿಗೆ ಮುಂದೆ ಪ್ರತಿಭಟನೆ ಮಾಡಲಾಯಿತು.

ಮಾಚಗುಂಡಾಳ ಗ್ರಾಮದ ರೈತ ಶಿವಪ್ಪ ನಾಗನಟಗಿ ಅವರು ಕಳೆದ ಮೂರು ದಿನಗಳ ಹಿಂದೆ ಬಾದ್ಯಾಪುರದ ಮಂಜುನಾಥ ಕೃಷಿ ಕೇಂದ್ರದಲ್ಲಿ 10ಕ್ಕೂ ಹೆಚ್ಚು ಚೀಲಗಳು ಖರೀದಿ ಮಾಡಿದ್ದು, ತಮ್ಮ ಜಮೀನಿನಲ್ಲಿ ಬೆಳೆದ ಹತ್ತಿ ಬೆಳೆಗೆ ಗೊಬ್ಬರ ಹಾಕಲು ಹೋದಾಗ ನಕಲಿ ಗೊಬ್ಬರ ಕಂಡ ರೈತ ಕಂಗಾಲಾಗಿದ್ದಾರೆ.

ಈ ಬಗ್ಗೆ ಕರವೇ ಸಂಘಟನೆ ಮಾಹಿತಿ ನೀಡಿದಾಗ ಕರವೇ ತಾಲ್ಲೂಕು ಅಧ್ಯಕ್ಷರು ಹಾಗೂ ಸದಸ್ಯರು ಸುರಪುರ ಕೃಷಿ ಇಲಾಖೆ ಮುಂದೆ ಪ್ರತಿಭಟಿಸಿ ಮನವಿ ನೀಡಿದ್ದಾರೆ. ಕೂಡಲೇ ಕ್ರಮ ತೆಗೆದುಕೊಂಡ ಕೃಷಿ ಇಲಾಖೆ ಅಧಿಕಾರಿಗಳು ಸಿಪಿಐ ಸುನಿಲ್ ಕುಮಾರ ಮೂಲಿಮನಿ, ಪಿಎಸೈ ಕೃಷ್ಣ ಸುಬೇದಾರ್ ಹಾಗೂ ಸಿಬ್ಬಂದಿ ನೇತೃತ್ವದಲ್ಲಿ ಬಾದ್ಯಾಪುರಕ್ಕೆ ತೆರಳಿ ರಸಗೊಬ್ಬರ ಮಳಿಗೆಯನ್ನು ಸೀಜ್ ಮಾಡಿದರು.

ವರದಿ: ಮೌನೇಶ ಬಿ. ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ

Edited By :
PublicNext

PublicNext

27/07/2022 05:28 pm

Cinque Terre

60.28 K

Cinque Terre

1

ಸಂಬಂಧಿತ ಸುದ್ದಿ