ಭಾರತೀಯ ಅಮೇರಿಕನ್ ರಾಜ್ ಸುಬ್ರಮಣ್ಯಂ ಕೊರಿಯರ್ ಪೂರೈಕೆ ದೈತ್ಯ ಕಂಪನಿ ಫೆಡೆಕ್ಸ್ ನ ನೂತನ ಸಿಇಒ ಆಗಿ ನೇಮಕಗೊಂಡಿದ್ದಾರೆ.
ಫ್ರೆಡೆರಿಕ್ ಡಬ್ಲ್ಯೂ ಸ್ಮಿತ್ ಅವರು ಜೂನ್ 1ರಂದು ಸಿಇಒ ಸ್ಥಾನದಿಂದ ಕೆಳಗಿಳಿಯಲಿದ್ದು, ಅವರ ಸ್ಥಾನಕ್ಕೆ ರಾಜ್ ಸುಬ್ರಮಣಿಯನ್ ನೇಮಕಗೊಂಡಿದ್ದಾರೆ. ಸದ್ಯ ಸುಬ್ರಹ್ಮಣ್ಯಂ ಕಾರ್ಯಾಧ್ಯಕ್ಷರಾಗಿದ್ದಾರೆ.
ಮುಂದೆ ನನ್ನ ಸ್ಥಾನವನ್ನು ರಾಜ್ ಸುಬ್ರಹ್ಮಣ್ಯಂ ವಹಿಸಿಕೊಳ್ಳಲಿದ್ದಾರೆ ಎಂದು ಹೇಳಲು ಹರ್ಷವಾಗುತ್ತಿದೆ ಎಂದು ಫ್ರೆಡೆರಿಕ್ ಡಬ್ಲ್ಯೂ ಸ್ಮಿತ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
1971 ರಲ್ಲಿ ಸ್ಥಾಪನೆಯಾದ ಈ ಕಂಪನಿಯಲ್ಲಿ 6 ಮಿಲಿಯನ್ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಕೇರಳ ಮೂಲಕ ಸುಬ್ರಹ್ಮಣ್ಯಂ ಮುಂಬೈ ಐಐಟಿ ವ್ಯಾಸಾಂಗ ಮಾಡಿದ್ದಾರೆ.
PublicNext
29/03/2022 02:20 pm