ಫ್ಯಾಷನ್ ಟೈಕೂನ್ ಆದ ಬರ್ನಾರ್ಡ್ ಅರ್ನಾಲ್ಟ್ ಅಮೆಜಾನ್ನ ಜೆಫ್ ಬೆಜೋಸ್ ಹಾಗೂ ಟೆಸ್ಲಾದ ಅಧ್ಯಕ್ಷ ಎಲಾನ್ ಮಸ್ಕ್ರನ್ನು ಮೀರಿ ವಿಶ್ವದ ಅತ್ಯಂತ ಸಿರಿವಂತ ಎನಿಸಿಕೊಂಡಿದ್ದಾರೆ.
ಫೋರ್ಬ್ಸ್ನ ರಿಯಲ್-ಟೈಮ್ ಬಿಲಿಯನೇರ್ ಪಟ್ಟಿಯ ಪ್ರಕಾರ, ಅರ್ನಾಲ್ಟ್ ನಿವ್ವಳ ಆಸ್ತಿ ಮೌಲ್ಯ ಗುರುವಾರ 19,910 ಕೋಟಿ ಅಮೆರಿಕನ್ ಡಾಲರ್ ಇತ್ತು. ಈ ಮಧ್ಯೆ ಬೆಜೋಸ್ ರಿಯಲ್ ಟೈಮ್ ನಿವ್ವಳ ಆಸ್ತಿ ಮೌಲ್ಯ 19,380 ಕೋಟಿ ಅಮೆರಿಕನ್ ಡಾಲರ್ ಇದ್ದರೆ, ಎಲಾನ್ ಮಸ್ಕ್ ನಿವ್ವಳ ಆಸ್ತಿ ಮೌಲ್ಯ 18,470 ಕೋಟಿ ಯುಎಸ್ಡಿ ಇತ್ತು.
72 ವರ್ಷದ ಅರ್ನಾಲ್ಟ್ ವಿಶ್ವದ ಪ್ರಮುಖ ಫ್ಯಾಷನ್ ಕಂಪೆನಿಯೊಂದರ ಮುಖ್ಯ ಹುದ್ದೆಯಲ್ಲಿದ್ದಾರೆ. LVMH ಮೊಯೆಟ್ ಹೆನಿಸ್ಸಿ ಲೂಯಿಸ್ ವ್ಯೂಟನ್ ಎಂಬ ವಿಲಾಸಿ ವಸ್ತುಗಳ ಮಾರಾಟದ ಮುಂಚೂಣಿಯಲ್ಲಿರುವ ಕಂಪೆನಿಯನ್ನು ಈ ಶತಕೋಟ್ಯಧಿಪತಿ ಮುನ್ನಡೆಸುತ್ತಾರೆ. ಈ ಕಂಪೆನಿಯು 70 ಬ್ರ್ಯಾಂಡ್ಗಳ್ನು ನೋಡಿಕೊಳ್ಳುತ್ತದೆ. ಅದರಲ್ಲಿ ಲೂಯಿಸ್ ವ್ಯೂಟನ್, ಮೊಯಿಟ್, ಫೆಂಡಿ, ಕ್ರಿಶ್ಚಿಯನ್ ಡಿಯಾರ್, ಗಿವೆಂಚಿ ಮತ್ತು ಸೆಫೊರಾ ಸಹ ಒಳಗೊಂಡಿದೆ.
PublicNext
06/08/2021 02:09 pm