ನವದೆಹಲಿ : ಭಾರತದ ಮಾರುಕಟ್ಟೆ ನಿಯಂತ್ರಕ, (Securities and Exchange Board of India)ಗೆ ಮೊದಲ ಬಾರಿಗೆ ಭಾರತದ ಮಹಿಳೆ ಮಾಧಬಿ ಪುರಿ ಬುಚ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. SEBI ಗೆ ಮಾಧಬಿ ಪುರಿ ಬುಚ್ಚ ಅವರನ್ನು ಅಧ್ಯಕ್ಷರಾಗಿ ಸರ್ಕಾರ ನೇಮಕ ಮಾಡಿದೆ. ಹಾಲಿ ಅಧ್ಯಕ್ಷ ಅಜಯ್ ತ್ಯಾಗಿ ಅವರ ಅಧಿಕಾರವಧಿ ಮುಕ್ತಾಯವಾದ ಹಿನ್ನೆಲಯಲ್ಲಿ ಮಾಧವಿ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.
ಮಾಧಬಿ ಅವರು ಹಣಕಾಸು ಮಾರುಕಟ್ಟೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಅನುಭವವನ್ನು ಹೊಂದಿದ್ದಾರೆ. ಈ ಹಿಂದೆ ಸೆಬಿಯಲ್ಲಿ, ಹೂಡಿಕೆ ನಿರ್ವಹಣೆ, ಸಾಮೂಹಿಕ ಹೂಡಿಕೆ ಯೋಜನೆಗಳು ಮತ್ತು ಕಣ್ಗಾವಲು ಸೇರಿದಂತೆ ವಿವಿಧ ಪೋರ್ಟ್ಫೋಲಿಯೊಗಳನ್ನು ನಿರ್ವಹಿಸಿದ್ದಾರೆ.
ದೆಹಲಿಯಲ್ಲಿ ಶಿಕ್ಷಣ ಪಡೆದು ಅಹಮದಾಬಾದ್ ನ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನಲ್ಲಿ, ಮ್ಯಾನೇಜ್ ಮೆಂಟ್ ಪದವಿಯನ್ನು ಪೂರ್ಣಗೊಳಿಸಿದರು. ನಂತರ ಇವರು ಹಲವು ಸಂಘ, ಸಂಸ್ಥೆ ಹಾಗೂ ರಾಷ್ಟ್ರೀಯ ಸ್ಟಾಕ್ ಎಕ್ಸ್ ಚೇಂಜ್ ಸಮಿತಿಯಂತಹ ವಿವಿಧ ಸಮಿತಿಗಳಲ್ಲಿ ಸದಸ್ಯರಾಗಿ ಸೇವೆಸಲ್ಲಿಸಿದ್ದಾರೆ.
ಐಸಿಐಸಿ ಬ್ಯಾಂಕ್ ICICI Bankನಿಂದ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇಲ್ಲಿ ಮ್ಯಾನೆಜಿಂಗ್ ಡೈರೆಕ್ಟರ್ ಆಗಿ 2009ರಿಂದ 2011ರವರೆಗೆ ಸೇವೆಸಲ್ಲಿಸಿದ್ದಾರೆ.
PublicNext
01/03/2022 02:07 pm