ನವದೆಹಲಿ: ಸತತ ಒಂಬತ್ತನೇ ವರ್ಷವೂ ಭಾರತದ ಅತ್ಯಂತ ಶ್ರೀಮಂತ ಎಂಬ ತನ್ನ ಪಟ್ಟವನ್ನು ಉಳಿಸಿಕೊಂಡಿರುವ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ, ಹರೂನ್ ಇಂಡಿಯಾ ಸಿದ್ಧಪಡಿಸಿರುವ 2020ನೇ ಸಾಲಿನ ಶ್ರೀಮಂತ ಪಟ್ಟಿ ಬಿಡುಗಡೆ ಆಗಿದ್ದು, ವಿಶ್ವದ ಐದು ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ವಿಶ್ವದ ಏಕೈಕ ವ್ಯಕ್ತಿ ಮುಕೇಶ್ ಅಂಬಾನಿ ಆಗಿದ್ದಾರೆ.
ಮುಕೇಶ್ ಅಂಬಾನಿಯು ದೇಶಾದ್ಯಂತ ಲಾಕ್ ಡೌನ್ ಸಂದರ್ಭದಲ್ಲಿ ಪ್ರತಿ ಗಂಟೆಗೆ 90 ಕೋಟಿ ರೂಪಾಯಿ ಆದಾಯವನ್ನು ಗಳಿಸುವ ಮೂಲಕ 2020ನೇ ಸಾಲಿನ ಐಐಎಫ್‌ಎಲ್ ವೆಲ್ತ್ ಹುರೂನ್ ಇಂಡಿಯಾ ರಿಚ್ ಪಟ್ಟಿಯಲ್ಲಿ ಸತತ ಒಂಬತ್ತನೇ ವರ್ಷವೂ ಭಾರತದ ಅತ್ಯಂತ ಶ್ರೀಮಂತ ಎಂಬ ತನ್ನ ಪಟ್ಟವನ್ನು ಉಳಿಸಿಕೊಂಡಿದ್ದಾರೆ.
ಹರೂನ್ ಇಂಡಿಯಾ ಸಿದ್ಧಪಡಿಸಿರುವ 2020ನೇ ಸಾಲಿನ ಶ್ರೀಮಂತ ಪಟ್ಟಿ ಬಿಡುಗಡೆ ಆಗಿದ್ದು, ವಿಶ್ವದ ಐದು ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ವಿಶ್ವದ ಏಕೈಕ ವ್ಯಕ್ತಿ ಮುಕೇಶ್ ಅಂಬಾನಿ ಆಗಿದ್ದಾರೆ.
ವಿಶ್ವದ ಐವರು ಅತ್ಯಂತ ಶ್ರೀಮಂತರಲ್ಲಿ ಏಕೈಕ ಭಾರತೀಯನಾಗಿರುವ ಅಂಬಾನಿ ಸರಣಿ ನಿಧಿ ಎತ್ತುವಳಿ ಮತ್ತು ಜಿಯೊ ಹಾಗೂ ರಿಲಯನ್ಸ್ ರಿಟೇಲ್‌ಗಳಲ್ಲಿ ಫೇಸ್‌ಬುಕ್, ಗೂಗಲ್, ಸಿಲ್ವರ್ ಲೇಕ್ ಇತ್ಯಾದಿ ಕಂಪನಿಗಳ ವ್ಯೂಹಾತ್ಮಕ ಹೂಡಿಕೆಗಳ ಮೂಲಕ 2,77,700 ಕೋ.ರೂ.ಗಳನ್ನು ಕಲೆಹಾಕಿದ್ದಾರೆ. ಇದರೊಂದಿಗೆ ಅವರ ವೈಯಕ್ತಿಕ ಸಂಪತ್ತು 6,58,400 ಕೋ.ರೂ. ಏರಿಕೆಯಾಗಿದೆ.
PublicNext
30/09/2020 08:42 am