ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ 47 ನೇ ಜಿಎಸ್‌ಟಿ ಕೌನ್ಸಿಲ್ ಸಭೆ ಇತ್ತೀಚೆಗೆ ನಡೆಯಿತು. ಈ ಸಭೆಯಲ್ಲಿ ತೆರಿಗೆ ಪದ್ಧತಿಯಲ್ಲಿ ಪ್ರಸ್ತಾಪಿಸಲಾದ ಹಲವಾರು ಬದಲಾವಣೆಗಳಿಗೆ ಅನುಮೋದನೆ ಸಿಕ್ಕಿದೆ. ಜುಲೈ 18ರಿಂದಲೇ ಇದು ಅನ್ವಯಿಸುತ್ತದೆ.
ನೂತನ ನಿಯಮದ ಪ್ರಕಾರ, ಬಾಡಿಗೆದಾರರು ಮನೆ ಬಾಡಿಗೆಗೆ ಶೇಕಡ 18 ರಷ್ಟು ಜಿಎಸ್‌ಟಿ ಪಾವತಿಸಲು ಕಡ್ಡಾಯಗೊಳಿಸಲಾಗಿದೆ. ಆದರೆ ಈ ನೂತನ ಜಿಎಸ್‌ಟಿ ನಿಯಮಗಳು ಬಾಡಿಗೆದಾರರು ಮತ್ತು ಮನೆ ಮಾಲೀಕರಲ್ಲಿ ಹಲವು ಗೊಂದಲ ಮೂಡಿಸಿದೆ. ಹೊಸ ನಿಯಮಗಳ ಪ್ರಕಾರ, ಜಿಎಸ್‌ಟಿ ನೋಂದಾಯಿತ ಬಾಡಿಗೆದಾರರು ರಿವರ್ಸ್ ಚಾರ್ಜ್ ಮೆಕ್ಯಾನಿಸಂ ಅಡಿಯಲ್ಲಿ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಇನ್‌ಪುಟ್ ತೆರಿಗೆ ಕ್ರೆಡಿಟ್ ಅಡಿಯಲ್ಲಿ ಬಾಡಿಗೆ ಮೇಲೆ ಪಾವತಿಸಿದ ಜಿಎಸ್‌ಟಿಯನ್ನು ಕ್ಲೈಮ್ ಮಾಡಬಹುದಾಗಿದೆ.
ಎಲ್ಲಾ ಬಾಡಿಗೆದಾರರಿಗೂ ಜಿಎಸ್‌ಟಿ ಅನ್ವಯ ಆಗಲ್ಲ ಆದರೆ, ನೂತನ ನಿಯಮ ಜಾರಿಗೆ ಬಂದರೂ ಎಲ್ಲರೂ ಬಾಡಿಗೆ ಮೇಲೆ ಜಿಎಸ್‌ಟಿ ಕಟ್ಟುವ ಅವಶ್ಯಕತೆ ಇಲ್ಲ. ಜಿಎಸ್‌ಟಿಗೆ ನೋಂದಣಿ ಮಾಡಿಕೊಳ್ಳದ ಸಾಮಾನ್ಯ ವೇತನದಾರರು ತಾವು ಕಟ್ಟುವ ಮನೆ ಬಾಡಿಗೆ ಮೇಲೆ ಜಿಎಸ್‌ಟಿ ಅನ್ವಯ ಆಗುವುದಿಲ್ಲ. ಈ ಮೂಲಕ ಸಾಮಾನ್ಯ ನಾಗರಿಕರು ಬಾಡಿಗೆ ಮೇಲಿನ ಜಿಎಸ್‌ಟಿಯಿಂದ ವಿನಾಯಿತಿ ಪಡೆಯುತ್ತಾರೆ. ಇದೇ ನಿಯಮ ಮನೆ ಬಾಡಿಗೆದಾರ ಅಥವಾ ಮಾಲಿಕರಿಗೆ ಅನ್ವಯಿಸುತ್ತದೆ, ಮನೆ ಮಾಲೀಕರು ಜಿಎಸ್‌ಟಿ ನೋಂದಣಿ ಮಾಡಿಕೊಂಡಿಲ್ಲದಿದ್ದರೆ, ಅಥವಾ ಅವರ ಆದಾಯ ಜಿಎಸ್‌ಟಿ ವ್ಯಾಪ್ತಿಗೆ ಬಂದಿಲ್ಲವಾದರೆ ಮನೆ ಅಥವಾ ಆಸ್ತಿಯ ಮಾಲಿಕರು ತಾವು ಪಡೆಯುವ ಬಾಡಿಗೆ ಹಣಕ್ಕೆ ಯಾವುದೇ ಜಿಎಸ್‌ಟಿ ಅನ್ವಯ ಆಗುವುದಿಲ್ಲ.
PublicNext
13/08/2022 03:23 pm