ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಜೆಟ್ 2022 : ದೇಶದಲ್ಲಿ ಡಿಜಿಟಲ್ ಕರೆನ್ಸಿ : RBI ನಿಂದ ಚಲಾವಣೆ

ದೆಹಲಿ : ಬ್ಲಾಕ್ ಚೈನ್ ಸೇರಿದಂತೆ ಇತರ ತಂತ್ರಜ್ಞಾನಗಳನ್ನು ಬಳಸಿಕೊಂಡು ಡಿಜಿಟಲ್ ರೂಪಾಯಿಯನ್ನು 2022-23 ರಿಂದ ಆರ್ಬಿಐನಿಂದ ನೀಡಲಾಗುವುದು. ಎಂದು ನಿರ್ಮಲಾ ಸೀತಾರಾಮನ್ ಹೇಳಿದರು. ಇದು ಆರ್ಥಿಕತೆಗೆ ದೊಡ್ಡ ಉತ್ತೇಜನ ನೀಡುತ್ತದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ ಈ ಸಂಬಂಧ ಆರ್.ಬಿ ಐ ಸೂಚನೆ ಹೊರಡಿಸಲಿದೆ.

ಪಾವತಿಗಳಲ್ಲಿ ತಡವಾಗುತ್ತಿರುವುದನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. ಆನ್ಲೈನ್ ಬಿಲ್ ವ್ಯವಸ್ಥೆಯನ್ನೂ ಪ್ರಾರಂಭಿಸಲಾಗುತ್ತದೆ ಎಂದು ಹೇಳಿದ್ದಾರೆ. ಫಿಯೆಟ್ ಕರೆನ್ಸಿಯ ವರ್ಚುಯಲ್ ರೂಪವನ್ನು ಉಲ್ಲೇಖಿಸುವ ತಮ್ಮದೇ ಆದ ಕೇಂದ್ರ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC) ಹೊಂದಿರುವ ಕೆಲವು ದೇಶಗಳಿಗೆ ಭಾರತ ಸೇರುತ್ತದೆ.

ಭಾರತೀಯ ರಿಸರ್ವ್ ಬ್ಯಾಂಕ್ (RBI) ಈಗಾಗಲೇ ಕೇಂದ್ರ ಬ್ಯಾಂಕ್ ಡಿಜಿಟಲ್ ಕರೆನ್ಸಿ ಮತ್ತು ಖಾಸಗಿ ಕ್ರಿಪ್ಟೋ ಕರೆನ್ಸಿಗಳಿಗೆ ಸಂಬಂಧಿಸಿದ ವಿವಿಧ ಅಂಶಗಳ ಬಗ್ಗೆ ಚರ್ಚಿಸುತ್ತಿದೆ.

Edited By : Nirmala Aralikatti
PublicNext

PublicNext

01/02/2022 01:31 pm

Cinque Terre

58.44 K

Cinque Terre

9

ಸಂಬಂಧಿತ ಸುದ್ದಿ