ನವದೆಹಲಿ : ದುಬಾರಿ ದುನಿಯಾದಲ್ಲಿ ಜನ ಜೀವನ ನಡೆಸುವುದೇ ದುಸ್ಥರವಾದ ಕಾಲಮಾನದಲ್ಲಿ ಪೆಟ್ರೋಲ್ ಬೆಲೆ ಏರಿಕೆ ನೀರಿಳಿಯದ ಗಂಟಲೋಳ್ ಕಡುಬು ತುರಿಕಿದಂತಾಗಿತ್ತು. ಸದ್ಯ ತೈಲ ಬೆಲೆ ತಗ್ಗಿಸುವ ಬಗ್ಗೆ ಕೇಂದ್ರ ಮಹತ್ವ ನಿರ್ಧಾರವೊಂದನ್ನು ಕೈಗೊಳ್ಳಲು ಮುಂದಾಗಿದೆ.
ಎಥೆನಾಲ್ ಮಿಶ್ರಿತ ಪೆಟ್ರೋಲ್ ಕಾರ್ಯಕ್ರಮದ ಅಡಿಯಲ್ಲಿ ಸರ್ಕಾರವು ಎಥೆನಾಲ್ ಮೇಲಿನ ಜಿಎಸ್ ಟಿ ದರವನ್ನು ಶೇ.18 ರಿಂದ ಶೇ.5% ಇಳಿಸಿದೆ. EBP ಕಾರ್ಯಕ್ರಮದ ಅಡಿಯಲ್ಲಿ, ಎಥೆನಾಲ್ ಅನ್ನು ಪೆಟ್ರೋಲ್ ನಲ್ಲಿ ಬೆರೆಸ ಲಾಗುತ್ತದೆ ಎಂದು ವಿವರಿಸಿದೆ. ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ಪೆಟ್ರೋಲ್ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ರಾಮೇಶ್ವರ್ ತೇಲಿ ಈ ಮಾಹಿತಿ ನೀಡಿದ್ದಾರೆ.
2018 ರಲ್ಲಿ ಮೊದಲ ಬಾರಿಗೆ, ಎಥೆನಾಲ್ ತಯಾರಿಸಲು ಬಳಸುವ ಕಚ್ಚಾ ವಸ್ತುಗಳ ಆಧಾರದ ಮೇಲೆ ಸರ್ಕಾರವು ಎಥೆನಾಲ್ ದರವನ್ನು ನಿಗದಿಪಡಿಸಿದೆ. ಸಾರ್ವಜನಿಕ ವಲಯದ ತೈಲ ಕಂಪನಿಗಳ ಎಥೆನಾಲ್ ಖರೀದಿಯೂ ಹೆಚ್ಚಾಗಿದೆ.
ಕಬ್ಬಿನಿಂದ ತಯಾರಿಸಲಾಗುತ್ತದೆ ಎಥೆನಾಲ್!
C&B ಹೆವಿ ಕಾಕಂಬಿ, ಕಬ್ಬಿನ ರಸ, ಸಕ್ಕರೆ, ಸಕ್ಕರೆ ಪಾಕದಂತಹ ಕಬ್ಬು ಆಧಾರಿತ ಫೀಡ್ ಸ್ಟಾಕ್ ನಿಂದ ಉತ್ಪಾದಿಸಲಾದ ಎಥೆನಾಲ್ ನ ಖರೀದಿ ಬೆಲೆಯನ್ನು ಸರ್ಕಾರ ನಿರ್ಧರಿಸುತ್ತದೆ. ಪೆಟ್ರೋಲ್ ಗೆ ಹೆಚ್ಚು ಎಥೆನಾಲ್ ಸೇರಿಸುವುದರಿಂದ ಮಾಲಿನ್ಯವೂ ಕಡಿಮೆಯಾಗುತ್ತದೆ ಮತ್ತು ರೈತರಿಗೆ ಪ್ರತ್ಯೇಕ ಆದಾಯವನ್ನು ಗಳಿಸುವ ಮಾರ್ಗವನ್ನು ನೀಡುತ್ತದೆ ಎಂದು ಸರ್ಕಾರ ಹೇಳುತ್ತದೆ.
PublicNext
17/12/2021 02:00 pm