ನವದೆಹಲಿ: ಸತತ 5ನೇ ದಿನವೂ ಇಂಧನ ಬೆಲೆಯಲ್ಲಿ ಏರಿಕೆ ಕಂಡಿದ್ದು, ಇಂದು ಪೆಟ್ರೋಲ್ ಹಾಗೂ ಡಿಸೇಲ್ ಲೀಟರ್ಗೆ 35 ಪೈಸೆ ಹೆಚ್ಚಳವಾಗಿದೆ. ಈ ಮೂಲಕ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 107.59 ರೂಪಾಯಿ ಆದ್ರೆ ಡಿಸೇಲ್ ದರದಲ್ಲಿ 96.32 ರೂಪಾಯಿ ಏರಿಕೆ ಕಂಡಿದೆ.
ಬೆಂಗಳೂರಲ್ಲಿ ಪೆಟ್ರೋಲ್ ರೇಟ್ 110.98ಕ್ಕೆ ಏರಿಕೆಯಾಗಿದೆ. ಹಾಗೇ ಡಿಸೇಲ್ ಬೆಲೆ 103.82 ಪೈಸೆ ಏರಿಕೆ ಕಂಡಿದೆ. ಇನ್ನು ಮುಂಬೈನಲ್ಲಿ 113.12 ರೂಪಾಯಿ ಇದ್ದ ಪೆಟ್ರೋಲ್ ರೇಟ್ 113.46 ರೂಪಾಯಿ ಆಗಿದೆ. ಡಿಸೇಲ್ ದರ ಶೆಲ್ ಬಂಕ್ಗಳಲ್ಲಿ 104.38 ರೂಪಾಯಿ ಏರಿಕೆ ಕಂಡಿದೆ.
ಕೋಲ್ಕತ್ತಾದಲ್ಲಿ ಪೆಟ್ರೋಲ್ ರೇಟ್ 108.11 ರೂ. ಏರಿಕೆಯಾದರೆ, ಡಿಸೇಲ್ 99.43 ರೂಪಾಯಿಗೆ ಏರಿಕೆ ಕಂಡಿದೆ. ತಮಿಳುನಾಡಿನ ಚೆನ್ನೈನಲ್ಲಿ ಪೆಟ್ರೋಲ್ ರೇಟ್ 104.52 ರೂಪಾಯಿಯಾದ್ರೆ, ಡೀಸೆಲ್ 100.52 ರೂಪಾಯಿ ಏರಿಕೆಯಾಗಿದೆ. ದಿನೇ ದಿನೇ ಇಂಧನ ಬೆಲೆಯಲ್ಲಿ ಏರಿಕೆ ಆಗ್ತಿರೋದನ್ನ ಖಂಡಿಸಿ ನವೆಂಬರ್ 14 ರಂದು ದೇಶಾದ್ಯಂತ ಪ್ರತಿಭಟನೆ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ.
PublicNext
24/10/2021 09:14 am