ನವದೆಹಲಿ: ಆರ್ಥಿಕ ಸಂಕಷ್ಟದಲ್ಲಿರುವ ಲಕ್ಷ್ಮೀ ವಿಲಾಸ್ ಬ್ಯಾಂಕ್ ಅನ್ನು ಡಿಬಿಎಸ್ ಬ್ಯಾಂಕ್ (ಡಿಬಿಐಎಲ್) ಜೊತೆ ವಿಲೀನ ಮಾಡಲಾಗುತ್ತಿದೆ. ಇದೇ ಹಿನ್ನೆಲೆಯಲ್ಲಿ ಎಲ್ವಿಬಿಯನ್ನು ಒಂದು ತಿಂಗಳ ಕಾಲ ತಾತ್ಕಾಲಿಕವಾಗಿ ನಿಷೇಧಿಸಿದೆ.
ಈ ಸಂಬಂಧ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮಾಹಿತಿ ನೀಡಿದ್ದು, ''ಡಿಸೆಂಬರ್ 16ರವೆಗೆ ಲಕ್ಷ್ಮೀ ವಿಲಾಸ್ ಬ್ಯಾಂಕ್ನ ಗ್ರಾಹಕರು ಹಣ ಹಿಂಪಡೆಯುವ ಪ್ರಮಾಣಕ್ಕೆ ಮಿತಿ ಹಾಕಲಾಗಿದೆ. ಗರಿಷ್ಠ 25 ಸಾವಿರ ರೂ. ಮಾತ್ರ ವಿತ್ಡ್ರಾ ಮಾಡಲು ಅವಕಾಶ ಕೊಡಲಾಗಿದೆ. ಆರ್ಬಿಐನ ಸಲಹೆ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ'' ಎಂದು ತಿಳಿಸಿದೆ.
''ಆರ್‌ಬಿಐ ನಿಂದ ವಿಶೇಷ ಆದೇಶಗಳನ್ನು ಸ್ವೀಕರಿಸಿದ ಬಳಿಕ ಬ್ಯಾಂಕ್ ವೈದ್ಯಕೀಯ ಚಿಕಿತ್ಸೆ, ಶಿಕ್ಷಣ, ವಿವಾಹ ಮತ್ತು ಅನಿವಾರ್ಯ ತುರ್ತು ಸಂದರ್ಭಗಳಲ್ಲಿ ಮಿತಿಗಿಂದ ಹೆಚ್ಚಿನ ಹಣವನ್ನು ನೀಡಬಹುದು. ಆರ್‌ಬಿಐ ಸಲಹೆ ಮೇರೆಗೆ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ' ಎಂದು ಎಸ್‌ಬಿಐ ಮಾಹಿತಿ ನೀಡಿದೆ.
ಈ ಒಂದು ತಿಂಗಳ ಮೊರಾಟೋರಿಯಮ್ ಅವಧಿಯವರೆಗೆ ಎಲ್ವಿಬಿ ಮಂಡಳಿಯನ್ನು ಆರ್‌ಬಿಐ ಸೂಪರ್ಸೀಡ್ ಮಾಡಿ ಕೆನರಾ ಬ್ಯಾಂಕ್ನ ಮಾಜಿ ನಾನ್-ಎಕ್ಸಿಕ್ಯೂಟಿವ್ ಚೇರ್ಮನ್ ಟಿ.ಎನ್. ಮನೋಹರನ್ ಅವರನ್ನ ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿದೆ.
PublicNext
18/11/2020 10:14 am