ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಗಾರದ ಬೆಲೆಯಲ್ಲಿ ಭಾರಿ ಇಳಿಕೆ!

ಬೆಂಗಳೂರು: ಸದ್ಯ ಮದುವೆ, ಹಬ್ಬದ ಸಿಜನ್ ಈ ವೇಳೆ ಗಗನ ಕುಸುಮವಾಗಿದ್ದ ಬಂಗಾರದ ಬೆಲೆ ಕೇಳಿದ ಜನ ಸುಸ್ತಾಗಿ ಹೋಗಿದ್ದಾರೆ.

ಕೆಲವು ಕಾರ್ಯಕ್ರಮಗಳಿಗೆ ಕಷ್ಟವಾದರೂ ಕೊಳ್ಳುವುದನ್ನು ಮುಂದುವರೆಸಿದ್ದಾರೆ.

ಸದ್ಯ ಇರುವ ಬೆಲೆಯಲ್ಲಿಯೇ ಕೊಂಚ ತಗ್ಗಿದೆ ಹೌದು ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ.

ಮಂಗಳವಾರ 5,123ರೂ ಇದ್ದ 10 ಗ್ರಾಂ ಚಿನ್ನದ ಬೆಲೆಯಲ್ಲಿ 1,510 ರೂ ಇಳಿಕೆ ಕಂಡು 49,730ರೂ ದಾಖಲಾಗಿದೆ.

ಇನ್ನು, ಬೆಂಗಳೂರಿನಲ್ಲಿ ಗ್ರಾಂ ಚಿನ್ನದ ದರ ಕೂಡ ಇಳಿಕೆ ಕಂಡು 4,711ರೂ. ದಾಖಲಾಗಿದೆ.

ಇದೇ ರೀತಿ ಕೆಜಿ ಬೆಳ್ಳಿ ಬೆಲೆ ಕೂಡ ಏರಿದೆ. ಕೆಜಿ ಗೆ 62,000 ರೂ ದಾಖಲಾಗಿದೆ.

ರಾಜಧಾನಿ ದಿಲ್ಲಿಯಲ್ಲಿ 22 ಕ್ಯಾರಟ್ ಚಿನ್ನದ ದರವು 10 ಗ್ರಾಮ್ಗೆ 49,160 ರೂ. ಮುಟ್ಟಿದೆ. ಬೆಳ್ಳಿ ದರವು 62,000 ರೂ.ಗೆ ತಲುಪಿದೆ.

ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ ಅಲ್ಪ ಇಳಿಕೆ ಕಂಡು 47,711 ರೂ. ದಾಖಲಾಗಿದೆ. ಇನ್ನು, ಇದೇ ರೀತಿ 1 ಕೆಜಿ ಬೆಳ್ಳಿ ಬೆಲೆ 62,000 ರೂ. ಆಗಿದೆ.

ವಾಣಿಜ್ಯ ನಗರಿ ಮುಂಬಯಿನಲ್ಲಿ 22 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ 49,730 ರೂಪಾಯಿ ದಾಖಲಾಗಿದೆ.

ಇನ್ನು, ಒಂದು ಕೆ.ಜಿ. ಬೆಳ್ಳಿ ದರ 62,000 ರೂಪಾಯಿ ಇದೆ.

ದೇಶದ ಇತರೆ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿಯ ದರ ಎಷ್ಟಿದೆ?

ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿ ಇಂದು 10 ಗ್ರಾಂ ಆಭರಣದ ಬೆಲೆ 49,030 ರೂಪಾಯಿ ದಾಖಲಾಗಿದೆ.

ಬೆಳ್ಳಿ ದರ 62,000 ರೂಪಾಯಿ ಇದೆ.

ತಮಿಳುನಾಡಿನ ಚೆನ್ನೈನಲ್ಲಿ ಇಂದಿನ ಬಂಗಾರದ ಬೆಲೆ 10 ಗ್ರಾಂಗೆ 47,810 ರೂ ದಾಖಲಾಗಿದೆ. ಒಂದು ಕೆ.ಜಿ. ಬೆಳ್ಳಿ ದರ 62,000 ರೂಪಾಯಿ ಇದೆ.

ಮಂಗಳೂರಿನಲ್ಲಿ ಇಂದಿನ ಬಂಗಾರದ ಬೆಲೆ 10 ಗ್ರಾಂಗೆ 47,110 ರೂ ದಾಖಲಾಗಿದೆ. ಒಂದು ಕೆ.ಜಿ. ಬೆಳ್ಳಿ ದರ 62,000 ರೂಪಾಯಿ ಇದೆ.

ಒಟ್ಟಾರೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಏರಿಕೆ - ಇಳಿಕೆಯ ಹಾವು ಏಣಿ ಆಟ ಇದೆ.

Edited By : Nirmala Aralikatti
PublicNext

PublicNext

11/11/2020 10:23 am

Cinque Terre

35.78 K

Cinque Terre

1

ಸಂಬಂಧಿತ ಸುದ್ದಿ