ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

#BoycottAmazon ಟ್ರೆಂಟ್: ಗಣೇಶ ಸೇರಿದಂತೆ ಹಿಂದೂ ದೇವರ ಚಿತ್ರವುಳ್ಳ ಒಳಉಡುಪು ಮಾರಾಟ ನಿಲ್ಲಿಸಿದ ಅಮೆಜಾನ್

ನವದೆಹಲಿ: ನೆಟ್ಟಿಗರು ಹಾಗೂ ಗ್ರಾಹಕರ ಟೀಕೆಗೆ ಎಚ್ಚೆತ್ತ ಅಮೆಜಾನ್‌ ಹಿಂದೂ ದೇವರ ಚಿತ್ರವುಳ್ಳ ಒಳಉಡುಪು, ಡೋರ್‌ಮ್ಯಾಟ್‌ ಮಾರಾಟವನ್ನು ಸ್ಥಗಿತಗೊಳಿಸಿದೆ.

ಈ ಕುರಿತು ಮಂಗಳವಾರ ಸ್ಪಷ್ಟನೆ ನೀಡಿರುವ ಅಮೆಜಾನ್‌ ಡಾಡ್ ಕಾಮ್ ಇಂಕ್, 'ಪ್ರಶ್ನಾರ್ಹ ಉತ್ಪನ್ನಗಳನ್ನು ವಾಪಸ್ ಪಡೆಯುತ್ತಿದ್ದೇವೆ. ಎಲ್ಲ ಮಾರಾಟಗಾರರು ಮಾರಾಟ ಮಾರ್ಗಸೂಚಿಯನ್ನು ಪಾಲಿಸಬೇಕು. ಒಂದು ವೇಳೆ ಪಾಲಿಸದಿದ್ದರೆ ಅಂತವರ ಖಾತೆ ತೆರವುಗೊಳಿಸಲಾಗುವುದು, ಜೊತೆಗೆ ಕ್ರಮಗಳನ್ನು ಕೈಗೊಳ್ಳಲಾಗುವುದು' ಎಂದು ತಿಳಿಸಿದೆ.

ವಿದೇಶಗಳಲ್ಲಿ ಅಮೆಜಾನ್‌ ಮೂಲಕ ಹಿಂದೂಗಳು ಆರಾಧಿಸುವ ದೇವ ಗಣೇಶ ಮತ್ತು ಇತರ ದೇವತೆಗಳ ಚಿತ್ರವುಳ್ಳ ಒಳಉಡುಪು, ಡೋರ್‌ಮ್ಯಾಟ್‌ಗಳು ಮಾರಾಟವಾಗುತ್ತಿದ್ದವು. ಇದನ್ನು ಸ್ಕ್ರೀನ್‌ಶಾಟ್‌ ಸಮೇತ ಹಂಚಿಕೊಂಡಿದ್ದ ನೆಟ್ಟಿಗರು ಅಮೆಜಾನ್ ವಿರುದ್ಧ #BoycottAmazon ಅಭಿಯಾನ ಆರಂಭಿಸಿದ್ದರು. ಟ್ವಿಟ್ಟರ್‌ನಲ್ಲಿ ಇದು ಫುಲ್ ಟ್ರೆಂಡಿಂಗ್ ಆಗಿತ್ತು. ಇದರಿಂದ ಅಮೆಜಾನ್ ಎಚ್ಚೆತ್ತುಕೊಂಡಿದೆ.

Edited By : Vijay Kumar
PublicNext

PublicNext

10/11/2020 11:26 pm

Cinque Terre

45.72 K

Cinque Terre

1