ಬಾಗಲಕೋಟೆ : ತೆರೆದ ಬಂಡಿ ಎತ್ತಿನ ಸ್ಪರ್ಧೆಯಲ್ಲಿ ಸದಾ ವಿಜೇತವಾಗುತ್ತಿದ್ದ ರೈತನ ಮಿತ್ರ ಎತ್ತು ಬರೋಬ್ಬರಿ 11.50 ಲಕ್ಷ ರೂಪಾಯಿಗೆ ಮಾರಾಟವಾಗಿ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
ಹೌದು ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮದ ಶಿವಲಿಂಗಪ್ಪ ಹಾಗೂ ಮಾಯಪ್ಪ ಸಹೋದರರ 9 ವರ್ಷದ ಸೂರ್ಯ ಹೆಸರಿನ ಕಿಲಾರಿ ಎತ್ತು ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ.
ಆರು ವರ್ಷಗಳ ಹಿಂದೆ ಕೇವಲ 45 ಸಾವಿರ ರೂಪಾಯಿಗೆ ಖರೀದಿ ಮಾಡಿದ್ದ ಎತ್ತುಗಳು ಕಳೆದ ಮೂರು ವರ್ಷಗಳಲ್ಲಿ ಬಾಗಲಕೋಟೆ, ಬೆಳಗಾವಿ ಜಿಲ್ಲೆಯಲ್ಲಿ ತೆರೆ ಬಂಡಿ ಜಗ್ಗುವ ಸ್ಪರ್ಧೆಯಲ್ಲಿ ಭಾಗಿ ಎಲ್ಲರ ಗಮನ ಸೆಳೆಯುತ್ತಿದ್ದವು.
ಇನ್ನು ಈ ಜೋಡಿ ಎತ್ತು ಪಂದ್ಯಕ್ಕೆ ಎಂಟ್ರಿ ಕೊಟ್ಟರೆ ಸಾಕು ಬಹುಮಾನ ಫಿಕ್ಸ್. ಮೂರು ವರ್ಷಗಳಲ್ಲಿ ಅಂದಾಜು 8 ಲಕ್ಷ ರೂ. ನಗದು,ಬೈಕ್, ಚಿನ್ನ, ಬೆಳ್ಳಿ, ಗೆದ್ದು ತಂದಿವೆ ಈ ಎತ್ತುಗಳು.
ಸದ್ಯ ಈ ಜೋಡಿ ಎತ್ತು ದಾಖಲೆ ಮೊತ್ತಕ್ಕೆ ಮಾರಾಟವಾಗಿ ಮತ್ತೊಮ್ಮೆ ಎಲ್ಲರ ಗಮನ ಸೆಳೆದಿವೆ.
PublicNext
09/06/2022 01:53 pm