ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಪ್ಪಳ: ಬೆಲೆ ಕುಸಿತಕ್ಕೆ ನೊಂದು ಗೊನೆ ಮೂಡಿದ ಬಾಳೆ ನಾಶ ಮಾಡಿದ ರೈತ

ಕೊಪ್ಪಳ: ಬಾಳೆ ಹಣ್ಣಿನ ಬೆಲೆ ಕುಸಿತ ಹಿನ್ನೆಲೆ ಗೊನೆ ಮೂಡಿದ ಬಾಳೆಗಿಡಗಳನ್ನು ಸ್ವತಃ ರೈತನೇ ನಾಶಪಡಿಸಿದ್ದಾನೆ.ಕೊಪ್ಪಳ ತಾಲೂಕಿನ ಡೊಂಬರಳ್ಳಿಯಲ್ಲಿ ಈ ಘಟನೆ ನಡೆದಿದೆ.

ಸಿದ್ದರಡ್ಡಿ ದುರ್ಗದ ಎಂಬ ರೈತ ಬಾಳೆಯ ಬೆಲೆ ಕುಸಿತದಿಂದ ಕಂಗಾಲಾಗಿದ್ದ. ಗಿಡದಲ್ಲಿ ಗೊನೆ ಮಾಗಿದ ಹೊತ್ತಲ್ಲಿ ಕೈ ಕೊಟ್ಟಿದ್ದು ರೈತರಿಗೆ ನಷ್ಟವಾಗಿದೆ. ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಬಾಳೆಗೆ ಕೇವಲ 2 ರೂಪಾಯಿಗೆ ಮಾರಾಟವಾಗುತ್ತಿದೆ. ಇದರಿಂದ ಬಹುತೇಕ ರೈತರಿಗೆ ನಷ್ಟವಾಗುತ್ತಿದೆ. ಬೆಳೆಯಲು ಮಾಡಿದ ಖರ್ಚು ಹಾಗೂ ಕಟಾವು ವೆಚ್ಚವೂ ಇದರಿಂದ ಬಾರದಂತಾಗಿದೆ. ಹೀಗಾಗಿ ರೈತ ಸಿದ್ದರಡ್ಡಿ ದುರ್ಗದ ತಾನೇ ಬೆಳೆದ ಬೆಳೆಯನ್ನು ಜೆಸಿಬಿ ಮೂಲಕ ನಾಶಪಡಿಸಿದ್ದಾರೆ.

Edited By : Manjunath H D
PublicNext

PublicNext

03/12/2021 12:17 pm

Cinque Terre

32.81 K

Cinque Terre

1

ಸಂಬಂಧಿತ ಸುದ್ದಿ