ಚಿಕ್ಕಬಳ್ಳಾಪುರ: ಪಿತೃ ಪಕ್ಷ ಆಚರಣೆ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಹೂವಿನ ದರ ಅನಿರೀಕ್ಷಿತ ಮಟ್ಟದಲ್ಲಿ ಪಾತಾಳಕ್ಕೆ ಕುಸಿದಿದೆ. ಹೀಗಾಗಿ ನೊಂದ ರೈತರು ತಾವು ಬೆಳೆದ ಹೂಗಳನ್ನು ರಸ್ತೆಗೆ ಎಸೆದು ಹೋಗುತ್ತಿದ್ದಾರೆ. ಬೆಳೆದ ಖರ್ಚು ಹಾಗೂ ಸಾರಿಗೆ ವೆಚ್ಚ ಕೂಡ ವಾಪಸ್ ಸಿಗದ ಹಿನ್ನೆಲೆಯಲ್ಲಿ ಹೂ ಬೆಳೆದ ರೈತರ ಕೈಗೆ ಮುಳ್ಳು ಚುಚ್ಚಿದಂತಾಗಿದೆ.
ಮೇರಾಬುಲ್ ರೋಸ್ ಹೂವಿನ ಬೆಲೆ ಒಂದು ಕೆಜಿಗೆ 5 ರೂಪಾಯಿಗೆ ಬಿಕರಿಯಾಗಿದೆ. ಇದರಿಂದ ನೊಂದ ರೈತ ಹೂವನ್ನು ಬಿಸಾಡಿದ್ದಾರೆ. ಅಂದಹಾಗೆ ಪಿತೃಪಕ್ಷ ಆರಂಭವಾದ ನಂತರ ಹೂ ಕೇಳುವವರಿಲ್ಲ. ಮಾರ್ಕೆಟ್ ಗೆ ತೆಗೆದುಕೊಂಡು ಹೋದರೂ ವರ್ತಕರು ಖರೀದಿ ಮಾಡುತ್ತಿಲ್ಲ. ಚಿಕ್ಕಬಳ್ಳಾಪುರ ತಾಲೂಕಿನ ಹಲವೆಡೆ ಸಾವಿರಾರು ಎಕರೆಯಲ್ಲಿ ರೈತರು ಗುಲಾಬಿ, ಚೆಂಡು ಹೂ ಸೇರಿದಂತೆ ಸೇವಂತಿಗೆ ಬೆಳೆಯುತ್ತಾರೆ.
PublicNext
24/09/2021 04:26 pm