ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸದ್ಯದರಲ್ಲೇ ಅದಾನಿ ತೆಕ್ಕೆಗೆ ಮಂಗಳೂರು ವಿಮಾನ ನಿಲ್ದಾಣ

ಮಂಗಳೂರು-ನಗರದ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅಕ್ಟೋಬರ್ 31ರಿಂದ ಅದಾನಿ ಕಂಪನಿಯ ತೆಕ್ಕೆಗೆ ಸೇರಲಿದೆ. ಅದರ ನಿರ್ವಹಣೆ, ಕಾರ್ಯಾಚರಣೆ ಹಾಗೂ ಅಭಿವೃದ್ಧಿಯ ಹೊಣೆ ಇನ್ಮುಂದೆ ಈ ಕಂಪನಿಯೇ ನೋಡಿಕೊಳ್ಳಲಿದೆ. ಇದರೊಂದಿಗೆ ನವೆಂಬರ್ 2 ಹಾಗೂ 11ರಂದು ಕ್ರಮವಾಗಿ ಲಖನೌ ಹಾಗೂ ಅಹಮದಾಬಾದ್ ವಿಮಾನ ನಿಲ್ದಾಣದ ಜವಾಬ್ದಾರಿಯೂ ಅದಾನಿ ಕಂಪನಿಗೆ ಹಸ್ತಾಂತವಾಗಲಿದೆ.

2019ರಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಅದಾನಿ ಕಂಪನಿ ಒಟ್ಟು 6 ವಿಮಾನ ನಿಲ್ದಾಣಗಳನ್ನು ಗೆದ್ದುಕೊಂಡಿತ್ತು. ಆದ್ರೆ ಕೋವಿಡ್ ಕಾರಣದಿಂದಾಗಿ ಮೂರು ವಿಮಾನ ನಿಲ್ದಾಣಗಳ ನಿರ್ವಹಣೆಯನ್ನು ಅದಾನಿ ಒಡೆತನದ ಕಂಪನಿ ಸ್ವೀಕರಿಸಿರಲಿಲ್ಲ.

ಈಗಾಗಲೇ ಜೈಪುರ, ತಿರುವನಂತಪುರಂ, ಹಾಗೂ ಜೈಪುರ ವಿಮಾನ ನಿಲ್ದಾಣಗಳ ನಿರ್ವಹಣೆಯನ್ನು ಅದಾನಿ ಒಡೆತನದ ಕಂಪನಿ ನಿಭಾಯಿಸುತ್ತಿದೆ.

Edited By : Nagaraj Tulugeri
PublicNext

PublicNext

23/10/2020 05:53 pm

Cinque Terre

39.25 K

Cinque Terre

12

ಸಂಬಂಧಿತ ಸುದ್ದಿ