ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅರಟಾಳ ಗ್ರಾಮ ದೇವರುಗಳ ಪಲ್ಲಕ್ಕಿ ಉತ್ಸವ

ಅಥಣಿ : ದಸರಾ ನಿಮಿತ್ಯ ತಾಲೂಕಿನ ಅರಟಾಳ ಗ್ರಾಮದಲ್ಲಿ ಸಂಭ್ರಮದಿಂದ ಆಚರಿಸಲಾಯಿತು,ಗ್ರಾಮ ದೇವರುಗಳಾದ ಮಾಳಿಂಗೇಶ್ವರ, ಮಲ್ಲಿಕಾರ್ಜುನ, ಭಾವೂಸಾಹೇಬ ಮಹಾರಾಜರ, ಹನುಮಾನ ದೇವರ ಪಲ್ಲಕ್ಕಿಗಳನ್ನ ಭವ್ಯ ವಾದ್ಯ ಮೇಳದೊಂದಿಗೆ ಪ್ರಮುಖ ಬೀದಿಗಳಲ್ಲಿ ಗ್ರಾಮದ ಸಂಚರಿಸಿತು.

ಮಲ್ಲಿಕಾರ್ಜುನ ಗುಡ್ಡಕ್ಕೆ ತೆರಳಿ ಬನ್ನಿ ಮಹಾಮಂಟಪದಲ್ಲಿ ಪೂಜಾ ಕಾರ್ಯಕ್ರಮ ನೇರವೆರಿಸಿಕೊಂಡು ನಂತರ ದೇವರಿಗೆ ಬನ್ನಿ ಕೂಡುವುದು ವಾಡಿಕೆ. ಅಲ್ಲಿಂದ ಮಾಳಿಂಗೇಶ್ವರ ಪಾದಗಟ್ಟಿಗೆ ದೇವರ ಪಲ್ಲಕ್ಕಿಗಳು ಭೇಟಿ ನೀಡಿ ಪೂಜೆ ಸಲ್ಲಿಸಿ ಗ್ರಾಮಕ್ಕೆ ಆಗಮಿಸಿದವು. ದೇವರ ಪಲ್ಲಕ್ಕಿಗಳು ದೇವಸ್ಥಾನಕ್ಕೆ ಬಂದ ನಂತರ ದೇವಸ್ಥಾನ ಸದ್ಗುರುಗಳ ಪಲ್ಲಕಿಯನ್ನ ಗ್ರಾಮದಲ್ಲಿ ಒಬ್ಬರಿಗೊಬ್ಬರು ಬನ್ನಿ ಹಂಚಿ ಕೊಂಡು ಸಂಭ್ರಮಿಸಿದರು.

ಭಾವೂಸಾಹೇಬ ಮಹಾರಾಜರ ಪಲ್ಲಕಿಯು ಭಕ್ತರ ಮನೆಗೆ ತೆರಳಿ ಆಶೀರ್ವಾದಿಸಿ, ಲಕ್ಷ್ಮೀ ಮುಂದೆ ಸ್ವಾಗತಿಸಿದ ಮುತ್ತೈದೆಯರು ಆರತಿ ಬೆಳಗಿ ಪ್ರಸಾದ ವ್ಯವಸ್ಥೆ ಮಾಡಿದರು. ಗ್ರಾಪಂ ಸದಸ್ಯ ರಾಮಪ್ಪ ಪೂಜಾರಿ, ಮಲ್ಲಪ್ಪ ಪೂಜಾರಿ, ಹಣಮಂತ ಪೂಜಾರಿ, ಮಾಳಪ್ಪ ಕಾಂಬಳೆ, ಅರ್ಚಕ ನಿಂಗಪ್ಪ ಪೂಜಾರಿ, ಗೋಪಾಲ ಗೊರವ, ಗಿರಮಲ್ಲ ಮಾಳಿ, ಸತ್ಯಪ್ಪ ಪೂಜಾರಿ, ಶ್ರೀಶೈಲ ಪೂಜಾರಿ, ಸದಾನಂದ ಮಾಡಗ್ಯಾಳ ಸೇರಿದಂತೆ ಅನೇಕರಿದ್ದರಯ.

Edited By : PublicNext Desk
Kshetra Samachara

Kshetra Samachara

06/10/2022 08:54 am

Cinque Terre

6.1 K

Cinque Terre

0

ಸಂಬಂಧಿತ ಸುದ್ದಿ