ಬೆಳಗಾವಿ: ಪಂಚಮಸಾಲಿ ಮೀಸಲಾತಿಗಾಗಿ ಹೋರಾಟ ಮಾಡುತ್ತಿರುವ ಜಯಮೃತ್ಯುಂಜಯ ಸ್ವಾಮೀಜಿ ಸೇರಿದಂತೆ ಇನ್ನು ಪಕ್ಷ ಭೇದಭಾವ ಮರೆತು ಶುಕ್ರವಾರ ಮೂಡಲಗಿ ತಾಲೂಕಿನ ಕಲ್ಲೋಳ್ಳಿಯಲ್ಲಿ ತಮ್ಮ ಸಮುದಾಯದ ಮೂಲ ಹಕ್ಕೊತ್ತಾಯದ ಬೃಹತ್ ಸಮಾವೇಶ ನಡೆಸಿದರು.
ಈ ವೇಳೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಅರಭಾವಿ ಮತಕ್ಷೇತ್ರದಲ್ಲಿ ಪಂಚಮಸಾಲಿ ಸಮಾಜ ರಾಜಕೀಯದಲ್ಲಿ ಎಂದಿಗೂ ನಿಂತಿಲ್ಲ ಎಂದು ಈ ಬಾರಿ ನೀವೂ ದೊಡ್ಡ ಮನಸ್ಸು ಮಾಡಿ. ನಮ್ಮ ಸಮಾಜದವರು ಮುಂದೆ ಬಂದರೆ ಹಾಯುವುದಿಲ್ಲ. ಹಿಂದೆ ಬಂದರೆ ಒದೆಯುವುದಿಲ್ಲ ಅಂತ ತಿಳಿದುಕೊಂಡರೆ ಕಳೆದ ವಿಧಾನ ಪರಿಷತ್ ಚುನಾವಣೆಯ ಫಲಿತಾಂಶವೇ ಉತ್ತರ ಎಂದು ಸಮುದಾಯದ ತೋರಿಸಿಕೊಟ್ಟಿದೆ. ಈ ಸಮಾವೇಶಕ್ಕೆ ಎಷ್ಟೊ ಅಡೆತಡೆಗಳು ಬಂದರೂ ನಮ್ಮ ಸಮುದಾಯ ಜಗ್ಗಲಿಲ್ಲ. ಯಾರ ಹತ್ತಿರವೂ ಸ್ಪಾಪನ್ಸರ್ ತೆಗೆದುಕೊಂಡು ಈ ಕಾರ್ಯಕ್ರಮ ಮಾಡಿಲ್ಲ. ಎಲ್ಲರೂ ಸ್ವಾಭಿಮಾನದಿಂದ ಈ ಸಮಾವೇಶವನ್ನು ಇಲ್ಲಿ ಮಾಡುತ್ತಿದ್ದೇವೆ ಎಂದು ಅಪರೋಕ್ಷವಾಗಿ ಜಾರಕಿಹೊಳಿ ಬ್ರದರ್ ಟಾಂಗ್ ನೀಡಿದರು.
PublicNext
08/10/2022 05:27 pm