ಅಥಣಿ : ರಾಜ್ಯಕ್ಕೆ ಇವತ್ತು ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಅವರು ಕಾಲು ಇಟ್ಟಲೆಲ್ಲ ಬಿಜೆಪಿಯ ಕಮಲ ಅರಳುತ್ತದೆ ಹಾಗಾಗಿ ಅವರಿಗೆ ನಾನು ಸ್ವಾಗತ ಬಯಸುತ್ತೇನೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಲಕ್ಷ್ಮಣ್ ಸವದಿ ಕೈ ಮುಖಂಡರ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಐಗಳಿ ಗ್ರಾಮದಲ್ಲಿ ನೂತನವಾಗಿ ಪೊಲೀಸ್ ಠಾಣಾ ಉದ್ಘಾಟನೆ ನೆರವೇರಿಸಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸದ್ಯ ಕಾಂಗ್ರೆಸ್ ಪಕ್ಷದವರು ಭಾರತ್ ಜೋಡೋ ಪಾದಯಾತ್ರೆ ಮಾಡುತ್ತಿದ್ದಾರೆ.
ಭಾರತ ಎಲ್ಲಿ ಒಡೆದಿದೆ ಎಂದು ಇವರು ಜೋಡೋ ಕಾರ್ಯಕ್ರಮ ಮಾಡುತ್ತಿದ್ದಾರೆ, ಡಿಕೆ ಶಿವಕುಮಾರ್ ಸಿದ್ದರಾಮಯ್ಯ ಜೋಡಿ ಮಾಡೋದಕ್ಕೆ ಭಾರತ ಜೋಡೋ ಮಾಡುತ್ತಿದ್ದಾರೆ ಎಂದು ಸವದಿ ಕೈ ಪಕ್ಷದ ವಿರುದ್ಧ ಹರಿಹಾಯ್ದಾದರು.
ಪಿ ಎಫ್ ಐ ಬ್ಯಾನ್ ವಿಚಾರ : ದೇಶಾದ್ಯಂತ ಕೇಂದ್ರ ಸರ್ಕಾರ ದಿಟ್ಟ ನಿರ್ಧಾರದಿಂದ, ಪಿಎಫ್ ಐ ಬ್ಯಾನ್ ಮಾಡಿದ್ದಕ್ಕೆ ಕಾಂಗ್ರೆಸ್ ನವರು ಮನಬಂದಂತೆ ಮಾತನಾಡುತ್ತಿದ್ದಾರೆ, ಮೊದಲು ತಾಕತ್ತಿದ್ದರೆ ಪಿಎಫಐ ಬ್ಯಾನ್ ಮಾಡಲೆಂದು ಮಾಜಿ ಸಿಎಂ ಸಿದ್ದರಾಮಯ್ಯನವರು ಸವಾಲ್ ಹಾಕಿದ್ದರು.
ಬ್ಯಾನ್ ಆಗುತ್ತಿದ್ದಂತೆ ಮತ್ತೆ ಆರ್ ಎಸ್ ಎಸ್ ಬಗ್ಗೆ ಮಾತನಾಡುತ್ತಾರೆ, ಸದ್ಯ ಕಾಂಗ್ರೆಸ್ ನವರಿಗೆ ಮಾತನಾಡುವುದಕ್ಕೆ ಏನು ಇಲ್ಲ. ಹೀಗಾಗಿ ಏನೇನೋ ಮಾತನಾಡುತ್ತಿದ್ದಾರೆಂದು ಸವದಿ ಕಾಂಗ್ರೆಸ್ ನಾಯಕರ ವಿರುದ್ದ ಹರಿಹಾಯ್ದರು.
PublicNext
03/10/2022 10:48 pm