ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಮನೆ ಕಳೆದುಕೊಂಡ ಸಂತ್ರಸ್ತನಿಗೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಾಂತ್ವನ

ಖಾನಾಪೂರ: ಮಹಾ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮದ ಬಡ ರೈತ ಈರಪ್ಪ ನಾಡಗೌಡರ ಮನೆ ಬಿದ್ದು 9 ತಿಂಗಳು ಕಳೆದರೂ ಯಾವುದೇ ಶಾಸಕರು, ಅಧಿಕಾರಿಗಳು ಭೇಟಿ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಪ್ರಮೋದ್ ಕೋಚೇರಿ ಅವರು ಭೇಟಿ ನೀಡಿ ರೈತ ಈರಪ್ಪ ಅವರಿಗೆ ಆದಷ್ಟು ಬೇಗ ಮನೆಯನ್ನು ಮಂಜೂರು ಮಾಡಿ ಕೊಡುತ್ತೇವೆ ಎಂದು ಭರವಸೆ ನೀಡಿದರು.

ಬಳಿಕ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ PDO ಜೊತೆ ಮಾತನಾಡಿ, ಆದಷ್ಟು ಬೇಗ ಮನೆ ನಿರ್ಮಾಣಕ್ಕೆ ಬೇಕಾದ ಸವಲತ್ತುಗಳನ್ನು ಮಾಡಿಕೊಡಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ನಿರ್ದೇಶಕರಾದ ಸುರೇಶ್ ದೇಸಾಯಿ ಹಾಗೂ ಯುವ ಮೋರ್ಚಾ ಅಧ್ಯಕ್ಷ ದರ್ಶನ್ ಕಿಲಾರಿ ಹಾಗೂ ಬಿಜೆಪಿ ಸಾಮಾಜಿಕ ಜಾಲತಾಣದ ಪ್ರಮುಖರಾದ ಸಿದ್ದು ಪಾಟೀಲ್ ಹಾಗೂ ಬಿಜೆಪಿಯ ಗ್ರಾಮದ ಕಾರ್ಯಕರ್ತರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Edited By : Nagesh Gaonkar
PublicNext

PublicNext

28/09/2022 09:18 am

Cinque Terre

23.47 K

Cinque Terre

0

ಸಂಬಂಧಿತ ಸುದ್ದಿ