ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ : ಶಾಸಕರ ಆರೋಗ್ಯಕ್ಕಾಗಿ ಯಲ್ಲವ್ವನಿಗೆ ದೀರ್ಘದಂಡ ನಮಸ್ಕಾರ !

ಸವದತ್ತಿ : ಕಳೆದ ಹಲವು ದಿನಗಳಿಂದ ಸವದತ್ತಿ ಕ್ಷೇತ್ರದ ಶಾಸಕ ಹಾಗೂ ಡೆಪ್ಯೂಟಿ ಸ್ಪೀಕರ್ ಆಗಿರುವ ಆನಂದ ಮಾಮನಿ ಅವರ ಆರೋಗ್ಯದಲ್ಲಿ ಏರುಪೇರು ಆಗಿ, ಅವರ ಆಸ್ಪತ್ರೆಯಲ್ಲಿ ದಾಖಲು ಆಗಿದ್ದಾರೆ.

ಈ ಕುರಿತು ಅವರ ಆರೋಗ್ಯದ ಬಗ್ಗೆ ಅನೇಕ ರೀತಿಯ ವದಂತಿಗಳು ಹಬ್ಬಿದ್ದವು. ನಿನ್ನೆಯಷ್ಟೆ ಈ ಎಲ್ಲ ವದಂತಿಗಳಿಗೆ ಸ್ವತಃ ಶಾಸಕರಾದ ಮಾಮನಿ ಅವರೇ ತಮ್ಮ ಆರೋಗ್ಯದ ಕುರಿತು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ ನಾನು ಆರೋಗ್ಯವಾಗಿದ್ದೇನೆ ಎಂದು ಹೇಳಿಕೆ ನೀಡಿದ್ದರು.

ಆದ್ದರಿಂದ ಅವರು ಅಭಿಮಾನಿಗಳು ಶುಕ್ರವಾರದಂದು ಮುಂಜಾನೆ 6 ಗಂಟೆಗೆ ತಮ್ಮ ಶಾಸಕರಾದ ಆನಂದ ಮಾಮನಿಯವರ ಆರೋಗ್ಯ ಸುಧಾರಿಸಿ ಬೇಗ ಗುಣಮುಖರಾಗಲೇಂದು ಸವದತ್ತಿಯ ಜಂಗಮ ಸಮಾಜದ ವತಿಯಿಂದ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಸವದತ್ತಿ ತಾಲೂಕಿನ ಎಲ್ಲ ಜಂಗಮ ಸಮಾಜದ ಬಾಂಧವರು ಹಾಗೂ ಅವರ ಅಭಿಮಾನಿಗಳು ದೀರ್ಘದಂಡ ನಮಸ್ಕಾರ ಹಾಕಿ ಪ್ರಾರ್ಥನೆ ಮಾಡಿದರು. ಮತ್ತು ಮಾಮನಿ ಕಲ್ಯಾಣ ಮಂಟಪದಲ್ಲಿ ಮೃತ್ಯುಂಜಯ ಹೋಮ ಪೂಜೆಯನ್ನು ಕೂಡಾ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಬಸವಲಿಂಗ ಮಹಾಸ್ವಾಮಿಗಳ ನೇತೃತ್ವದಲ್ಲಿ ಉರುಳು ಸೇವೆ ಹಾಗೂ ಮೃತ್ಯುಂಜಯ ಯಾಗ ಹೋಮ ಮಾಡಿದರು.

Edited By : Shivu K
PublicNext

PublicNext

16/09/2022 12:46 pm

Cinque Terre

25.86 K

Cinque Terre

1

ಸಂಬಂಧಿತ ಸುದ್ದಿ