ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ರಸ್ತೆ ನಿರ್ಮಿಸದ ಶಾಸಕನಿಗೆ ಮಹಿಳೆಯರಿಂದ ತರಾಟೆ: ಸ್ಥಳದಿಂದ ಕಾಲ್ಕಿತ್ತ ಎಂಎಲ್‌ಎ

ಬೆಳಗಾವಿ: ಜಿಲ್ಲೆಯ ರಾಮದುರ್ಗ ತಾಲೂಕಿನಲ್ಲಿ ನಾಲ್ಕು ದಶಕ ಕಳೆದರೂ ರಸ್ತೆ ಅಭಿವೃದ್ಧಿ ಪಡಿಸದ ಬಿಜೆಪಿ ಶಾಸಕ ಮಹಾದೇವಪ್ಪ ಯಾದವಾಡ‌ಗೆ ಮಹಿಳೆಯರು ತರಾಟೆಗೆ ತೆಗೆದುಕೊಂಡ ಘಟನೆ ರಾಮದುರ್ಗ ‌ತಾಲೂಕಿನ ಚಿಕೊಪ್ಪ ಕೆ.ಎಸ್ ಗ್ರಾಮದಲ್ಲಿ ನಡೆದಿದೆ.

ರಸ್ತೆ ಅಭಿವೃದ್ಧಿ ಕಾಮಗಾರಿ ಗುದ್ದಲಿ ಪೂಜೆಗೆಂದು ಶಾಸಕ ಮಹಾದೇವಪ್ಪ ಯಾದವಾಡ ಚಿಕ್ಕೊಪ್ಪ ಗ್ರಾಮಕ್ಕೆ ಆಗಮಿಸಿದ್ದರು. ಚಿಕೊಪ್ಪ ಕೆ.ಎಸ್ ಗ್ರಾಮದಲ್ಲಿ 10 ಲಕ್ಷ ವೆಚ್ಚದ ರಸ್ತೆ ಕಾಮಗಾರಿ ಚಾಲನೆಗೆ ಶಾಸಕ ಯಾದವಾಡ ಬಂದಿದ್ದರು. ಈ ವೇಳೆ ಪಕ್ಕದ ಬಡಾವಣೆ ನಿವಾಸಿಗಳಿಂದ ಶಾಸಕ ಯಾದವಾಡಗೆ ತರಾಟೆಗೆ ತೆಗೆದುಕೊಂಡರು. ನಮ್ಮ ಕಾಲೋನಿಯ ರಸ್ತೆ ಅಭಿವೃದ್ಧಿ ಪಡಿಸುವಂತೆ ಮಹಿಳೆಯರು ಪಟ್ಟು ಹಿಡಿದರು. 40 ವರ್ಷಗಳಿಂದ ಮನವಿ ಸಲ್ಲಿಸಿದರೂ ರಸ್ತೆ ಅಭಿವೃದ್ಧಿ ಆಗ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಮಹಿಳೆಯರು ಶಾಸಕರನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡರು. ಆಗ ಶಾಸಕ ಮಹಾದೇವಪ್ಪ ಯಾದವಾಡ ಸ್ಥಳದಿಂದ ಕಾಲ್ಕಿತ್ತರು.

ಬಳಿಕ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಫೋನ್ ಮಾಡಿ ರಸ್ತೆ ಅಭಿವೃದ್ಧಿಗೆ ಯೋಜನೆ ರೂಪಿಸುವಂತೆ ಸೂಚನೆ ನೀಡಿದರು.

Edited By : Shivu K
PublicNext

PublicNext

19/09/2022 09:45 am

Cinque Terre

24.77 K

Cinque Terre

0

ಸಂಬಂಧಿತ ಸುದ್ದಿ