ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಗವಾಡ : ನೀರಾವರಿ ಹೆಸರಿನಲ್ಲಿ ಕಮಿಷನ್ ಭೂತ : ಇದು ನಿಜವಾ ರೈತರು ಹಿಂಗ್ಯಾಕ್ ಅಂದ್ರು

ಕಾಗವಾಡ : ಎರಡು ಕೆಲಸ ಒಂದೆ ಇಲಾಖೆ ಕಾಮಗಾರಿ ವಿಷಯದಲ್ಲಿ ಯಡವಿದ್ಯಾಕೆ ? ಅಂತಾ ರೈತರು ಪ್ರಶ್ನೆ ಮಾಡ್ತಿದ್ದಾರೆ. ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಅನ್ನೋ ಗಾದೆ ಮಾತು ಇಲ್ಲಿ ದಿಟವಾಯ್ತಾ ಹಾಗಿದ್ರೆ ಯಾಕಿ ಗೊಂದಲ. ರೈತರು ಹೇಳೋಹಾಗೆ ಈ ಯೋಜನೆಗೆ ಕಮಿಷನ್ ಭೂತ ಏನಾದ್ರು ಅಂಟಿಕೊಂಡಿದೆಯೇ ಎನ್ನುವ ಅನುಮಾನಗಳು ಗೋಚರವಾಗುತ್ತಿವೆ.

ಬೆಳಗಾವಿ ಜಿಲ್ಲೆ ಕಾಗವಾಡ ಹಾಗೂ ಅಥಣಿ ತಾಲೂಕಿನಲ್ಲಿ ಎರಡು ಬೃಹತ್ ಕಾಮಗಾರಿಗಳು ಪ್ರಾರಂಭವಾಗಿವೆ. ಆರು ತಿಂಗಳ ಹಿಂದೆ ಭೂಮಿ ಪೂಜೆ ನೆರವೇರಿಸಿದ ಅಮ್ಮಜೇಶ್ವರಿ ಈಗಾಗಲೇ 50% ಪೂರ್ಣ ಗೊಂಡಿದೆ. ಆದ್ರೆ ಎಂಟು ವರ್ಷಗಳಿಂದ ಕುಂಟುತ್ತಾ ಸಾಗಿದ ಬಸವೇಶ್ವರ ಎತ ನೀರಾವರಿ ಇನ್ನು ಅರ್ಧಕ್ಕೆ ನಿಂತಿದೆ.

ಈ ಎರಡು ಕಾಮಗಾರಿ ಕೈಗೆತ್ತಿಕೊಂಡ ಹಿಪ್ಪರಗಿ ಆಣೆಕಟ್ಟು ನೀರಾವರಿ ನಿಗಮ ಕಾರ್ಯಪಾಲಕ ಅಭಿಯಂತರರು ಬಸವೇಶ್ವರ ಎತ ನೀರಾವರಿ ಕಾಮಗಾರಿ ವಿಷಯದಲ್ಲಿ ಆಸಕ್ತಿ ತೋರುತ್ತಿಲ್ಲ. ಬಹುತೇಕ ಕಮಿಷನ್ ದುಡ್ಡು ಬಂದಿಲ್ಲ ಅದಕ್ಕೆ ಕಾಮಗಾರಿ ಪೂರ್ಣಗೊಳ್ಳುವಲ್ಲಿ ವಿಳಂಬವಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ರೈತರ ಸಹನೆಯ ಕಟ್ಟೆ ಒಡೆಯೋ ಮುಂಚೆ ಅಧಿಕಾರಿಗಳು ಶೀಘ್ರವೇ ಕಾಮಗಾರಿ ಪೂರ್ಣಗೊಳಿಸಿ ಆದಷ್ಟು ಬೇಗ ನೀರು ಪೂರೈಕೆ ಮಾಡ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

Edited By : Manjunath H D
PublicNext

PublicNext

21/11/2024 10:36 am

Cinque Terre

10.05 K

Cinque Terre

0

ಸಂಬಂಧಿತ ಸುದ್ದಿ