ಬೆಳಗಾವಿ: ಹೈಕಮಾಂಡ್ ಯೋಗ್ಯರಿಗೆ ಸಚಿವ ಸ್ಥಾನವನ್ನು ನೀಡಿದೆ. ಎಲ್ಲವೂ ಸುಸೂತ್ರವಾಗಿ ನಡೆದಿದ್ದು, ಸದ್ಯ ಯಾವುದೇ ಖಾತೆ ಬದಲಾವಣೆಯ ಪ್ರಸ್ತಾವ ಇಲ್ಲ ಎಂದು ಸಹಕಾರ ಸಚಿವ ಕೆ. ಎನ್. ರಾಜಣ್ಣ ತಿಳಿಸಿದರು.
ಇಂದು ಬೆಳಗಾವಿಯಲ್ಲಿ ಮಾಧ್ಯಮದವರು ಖಾತೆ ಬದಲಾವಣೆಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ತರಹದ ಚರ್ಚೆಗಳಿಗೆ ಯಾವುದೇ ರೀತಿಯ ಸ್ಪಂದನೆ ಸಿಗುವುದಿಲ್ಲ. ಹೈಕಮಾಂಡ್ ಯೋಗ್ಯರಿಗೆ ಸಚಿವ ಸ್ಥಾನವನ್ನು ನೀಡಿದ್ದು, ಸದ್ಯ ಖಾತೆ ಬದಲಾವಣೆ ಪ್ರಸ್ತಾವ ಇಲ್ಲ ಎಂದರು.
ಸಹಕಾರ ಸಂಘ ಇನ್ನಷ್ಟು ರೈತರ ಆರ್ಥಿಕತೆಯನ್ನು ವೃದ್ಧಿಸುವ ಸಂಕಲ್ಪವನ್ನು ಸಹಕಾರ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಕೈಗೊಳ್ಳಲಾಗಿದೆ. ಸಹಕಾರ ಕ್ಷೇತ್ರವು ಗ್ರಾಮೀಣ ಭಾಗದಲ್ಲಿ ಆರ್ಥಿಕತೆ ವೃದ್ಧಿಸುವ ಕೆಲಸವನ್ನ ಮಾಡಲಿದೆ.
ಇನ್ನು ಸಹಕಾರ ಸಪ್ತಾಹ ಸಮಾರೋಪ ಸಮಾರಂಭ ನಡೆಯುತ್ತಿದ್ದ ಸಭಾಗೃಹದ ಮುಂಭಾಗದಲ್ಲಿ ರೈತರಿಂದ ಸತ್ಯಾಗ್ರಹ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ಸತ್ಯಾಗ್ರಹ ಮಾಡಲು ಎಲ್ಲರಿಗೂ ಅಧಿಕಾರವಿದೆ. ಅವರ ಸತ್ಯಾಗ್ರಹದ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲು ಸರ್ಕಾರ ಬದ್ಧವಾಗಿದೆ ಎಂದರು.
PublicNext
20/11/2024 07:24 pm