ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶ್ರೀ ಬಿಷ್ಠಾ ದೇವಿಗೆ ಉಡಿ ತುಂಬಿದ ಶಾಸಕಿ ಡಾ.ಅಂಜಲಿ ತಾಯಿ

ಬೆಳಗಾವಿ : ಖಾನಾಪುರ ಶಾಸಕಿ ಡಾ.ಅಂಜಲಿ ಹೇಮಂತ ನಿಂಬಾಳ್ಕರ್ ಅವರು ಜಾತ್ರೆಯ ನಿಮಿತ್ತವಾಗಿ ಖಾನಾಪೂರ ತಾಲ್ಲೂಕಿನ ಕಕ್ಕೇರಿ ಗ್ರಾಮಕ್ಕೆ ಭೇಟಿ ನೀಡಿ ಶ್ರೀ ಬಿಷ್ಠಾದೇವಿಗೆ ಉಡಿಯನ್ನು ತುಂಬಿದರು ಹಾಗೂ ದೇವಿಗೆ ನಮಸ್ಕರಿಸುವದರ ಮೂಲಕ ದೇವಿಯ ಆಶೀರ್ವಾದ ಪಡೆದುಕೊಂಡರು.

ಈ ಸಂದರ್ಭದಲ್ಲಿ ದೇವಸ್ಥಾನದ ಪಂಚ ಕಮಿಟಿಯ ಮುಖಂಡರು ಶಾಸಕೀಗೆ ಶಾಲು ಹೊದಿಸಿ ಸತ್ಕರಿಸಿದರು.

ಈ ಸಂದರ್ಭದಲ್ಲಿ ಕಕ್ಕೇರಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀ ಭೀಮಪ್ಪ ಅಂಭೋಜಿ,ಕೆಪಿಸಿಸಿ ಬ್ಲಾಕ್ ಅಧ್ಯಕ್ಷರಾದ ಮಹಾದೇವ ಕೋಳಿ, ರಿಯಾಜ ಪಟೇಲ್,ಅರುಣ್ ಬೇಳಗಾವಕರ್, ಜಾಂಬೊಟ್ಕರ ಸರ್ ,ಲಾಲ್ ಪಟೇಲ್,ಭರತೇಶ ತೋರೂಜಿ,ವಿವೇಕ್ ತಡಕೊಡ್,ಶಂಕರ ಭಾಗವಾಡಕರ,ಮಂಜು ಗೋಧೂಳಿ,ಯುಶೋಪ ಹರಗಿ, ಕಕ್ಕೇರಿ ಗ್ರಾಮದ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

05/10/2022 10:42 am

Cinque Terre

9.64 K

Cinque Terre

0

ಸಂಬಂಧಿತ ಸುದ್ದಿ