ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಕುಂದಾನಗರಿಯಲ್ಲಿ ಅದ್ದೂರಿಯಾಗಿ ಗಣಪತಿ ವಿಸರ್ಜನೆ

ಬೆಳಗಾವಿ: ನಗರದಲ್ಲಿ ಗಣಪತಿ ವಿಸರ್ಜನೆಯ ಅದ್ದೂರಿ ಮೆರವಣಿಗೆ ಇಂದು ಚಾಲನೆ ನೀಡಲಾಯಿತು.

ಹೌದು. ಬೆಳಗಾವಿಯ ಹುತಾತ್ಮ ಚೌಕ್‌ದಿಂದ ಮೆರವಣಿಗೆ ಆರಂಭವಾದ ಮೆರವಣಿಗೆಯಲ್ಲಿ ಸ್ಥಳೀಯ ಶಾಸಕರಾದ ಅಭಯ್ ಪಾಟೀಲ್, ಅನಿಲ್ ಬೆನಕೆ, ಸಂಸದೆ ಮಂಗಳಾ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಭಾಗಿಯಾದರು.

ಗಣಪತಿ ಮೂರ್ತಿಗಳ ವಿಸರ್ಜ ಪೂಜೆ ಸಲ್ಲಿಸುವುದರ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ನಗರದ ಒಟ್ಟು 382 ಸಾರ್ವಜನಿಕ ಗಣಪತಿಗಳು, 26 ಸಾವಿರ ಮನೆ ಗಣಪತಿಗಳು ಇಂದು ವಿಸರ್ಜನೆಯಾಗಲಿವೆ.

ಒಟ್ಟು ಒಂಬತ್ತು ಕಡೆಗಳಲ್ಲಿ ಗಣಪತಿ ವಿಸರ್ಜನೆಗೆ ಮಹಾನಗರ ಪಾಲಿಕೆಯಿಂದ ವ್ಯವಸ್ಥೆ ಮಾಡಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿದ್ದು, 7 ಜನ ಎಸ್‌ಪಿ, 28 ಜನ ಡಿವೈಎಸ್‌ಪಿ, 68 ಪಿಐ, 104 ಪಿಎಸ್ಐ, 164 ಎಎಸ್‌ಐ, 3,000 ಪೊಲೀಸ್ ಪೇದೆಗಳು, 10 ಕೆಎಸ್ಆರ್‌ಪಿ, 7 ಸಿಎಆರ್ ಒಂದು ರ‌್ಯಾಪಿಡ್ ಆ್ಯಕ್ಸನ್ ಪೋರ್ಸ್ ನಿಯೋಜನೆ ಮಾಡಲಾಗಿದೆ. ಜೊತೆಗೆ ಇಡೀ ನಗರದಾದ್ಯಂತ ಡ್ರೋಣ್ ಕಣ್ಗಾವಲಿದ್ದು 20 ಡ್ರೋಣ್ ಬಳಕೆ ಹಾಗೂ ಪ್ರಮುಖ ಸ್ಥಳಗಳಲ್ಲಿ 700 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡಿದ್ದಾರೆ.

ಇದರ ಜೊತೆಗೆ ಒಂದು ವಾಟರ್ ಜೆಟ್ ವಾಹನ, ವಜ್ರ ವಾಹನ, 100 ಸ್ಕೈ ಸೆಂಟ್ರಿಗಳು, 15 ವಾಚ್ ಟವರ್, 5 ಕ್ಯೂಆರ್‌ಟಿ ಟೀಮ್ ನಿಯೋಜನೆ ಮಾಡಿ ಭದ್ರತೆ ಆಯೋಜನೆ ಮಾಡಿ ನಿಗಾವಹಿಸಿದ್ದಾರೆ. ರಾತ್ರಿಯಿಡೀ ನಡೆಯಲಿರುವ ಗಣಪತಿ ವಿಸರ್ಜನಾ ಮೆರವಣಿಗೆ ನಡೆಯುತ್ತದೆ.

Edited By :
PublicNext

PublicNext

09/09/2022 10:31 pm

Cinque Terre

40.16 K

Cinque Terre

0

ಸಂಬಂಧಿತ ಸುದ್ದಿ