ಬೆಳಗಾವಿ: ವಕ್ಫ್ ವಿವಾದದ ಕುರಿತು ಸದನದಲ್ಲಿ ಇಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಪ್ರಸ್ತಾಪಿಸಿದರು. ಈ ವೇಳೆ ಅಶೋಕ್ ಹಾಗೂ ಸಚಿವ ಜಮೀರ್ ಅಹಮ್ಮದ್ ಖಾನ್ ನಡುವೆ ಸವಾಲು- ಪ್ರತಿ ಸವಾಲು ಜೋರಾಗಿ ವಾಗ್ವಾದಕ್ಕೆ ಕಾರಣವಾಯ್ತು.
ಮೈಸೂರಿನ ಒಂದು ಹಳ್ಳಿಯಲ್ಲಿ 101 ನೋಟಿಸ್ ಕೊಟ್ಟಿದ್ದಾರೆ ಎಂದು ಆರ್. ಅಶೋಕ್ ಪ್ರಸ್ತಾಪಕ್ಕೆ ಸಚಿವ ಜಮೀರ್ ಆಕ್ಷೇಪಿಸಿದರು. ವಕ್ಫ್ ನವರು ನೋಟಿಸ್ ಕೊಟ್ಟಿರೋದು ತಪ್ಪಿಲ್ಲ ಅಂದರೆ ನಾನು ಪ್ರತಿಪಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರಗೆ ನಿಲ್ತೀನಿ. ಬೇಕಿದ್ರೆ ಸ್ಪೀಕರ್ ನನಗೆ ಛೀಮಾರಿ ಹಾಕಲಿ ಎಂದು ಸವಾಲು ಹಾಕಿದರು ವಿಪಕ್ಷ ನಾಯಕ ಆರ್. ಅಶೋಕ್.
ಅಶೋಕ್ ಸವಾಲು ಸ್ವೀಕರಿಸಿ ಪ್ರತಿ ಸವಾಲು ಹಾಕಿದ ಸಚಿವ ಜಮೀರ್ ಅಹಮದ್ ಖಾನ್, 101 ನೋಟಿಸ್ ಕೊಟ್ಟಿದ್ದಾರೆ ಅಂದ್ರಲ್ಲ. ಅದರ ದಾಖಲೆ ಕೊಡಿ, ಈವಾಗ್ಲೇ ನಾನು ನನ್ನ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡ್ತೀನಿ. ವಕ್ಫ್ ನೋಟಿಸ್ ಕೊಟ್ಟಿದ್ದರೆ ರಾಜಕೀಯ ದಿಂದ ನಿವೃತ್ತಿ ತಗೊಳ್ತೇನೆ ಎಂದರು. ನಂತರ ಜಮೀರ್ ಅಹಮದ್ ದಾಖಲೆ ಕೇಳಿದ್ದಾರೆ, ಕೊಡ್ತೀನಿ ಎಂದು ಚರ್ಚೆ ಮುಂದುವರಿಸಿದರು ಆರ್ ಅಶೋಕ್. ವಕ್ಫ್ ಗೆ ಸರ್ಕಾರ ಒಂದಿಂಚೂ ಜಾಗ ಕೊಟ್ಟಿಲ್ಲ, ಅದೆಲ್ಲವೂ ದಾನಿಗಳು ಕೊಟ್ಟಿರೋದು ಎಂದರು ಜಮೀರ್.
PublicNext
13/12/2024 06:31 pm