ಬೆಳಗಾವಿ: ಕಿತ್ತು ಹೋದ ಗೋಡೆ, ಚಿಲಕವಿಲ್ಲದ ಬಾಗಿಲು, ಶಿಥಿಲಗೊಂಡ ಶೌಚಾಲಯದ ಕಟ್ಟಡ, ಇಂತಹ ದುಸ್ಥಿತಿಗೆ ತಲುಪಿದರು ಕಣ್ಮುಚ್ಚಿ ಕುಳಿತ ಅಧಿಕಾರಿಗಳು,ಹಾಗಾದ್ರೆ ಏನು ಈ ಸ್ಟೋರಿ ಅಂತಿರಾ ಇಲ್ಲಿದೆ ನೋಡಿ…
ಕಾಗವಾಡ ತಾಲೂಕಿನ ಉಗಾರ ಖುರ್ದ ಪಟ್ಟಣದಲ್ಲಿ ಸಾರ್ವಜನಿಕರಿಗಾಗಿ 2016-17ನೇ ಸಾಲಿನ 14 ನೇ ಹಣಕಾಸು ಯೋಜನೆಯಡಿಯಲ್ಲಿ ನಿರ್ಮಾಣವಾದ ಶೌಚಾಲಯ ಇದೀಗ ಅದೋಗತಿಗೆ ಬಂದಿದೆ.
ಇನ್ನು ಈ ಶೌಚಾಲಯಕ್ಕೆ ಪುರಸಭೆ ಅಧಿಕಾರಿಗಳು ಟೆಂಡರ್ ನೀಡದೆ, ಬಾಯಿ ಮಾತಿನ ಮೂಲಕ 'ಶಾಮಬಾಯಿ' ಎಂಬ ಮಹಿಳೆಯ ಜವಾಬ್ದಾರಿಗೆ ಬಿಟ್ಟು ಕೈಕಟ್ಟಿ ಕುಳಿತ್ತಿದ್ದಾರೆ.
ಶಾಮಬಾಯಿ ಈ ಶೌಚಾಲಯವನ್ನು ಸ್ವ-ಇಚ್ಛೆಯಿಂದ ನೋಡಿಕೊಂಡು ದಿನ ಬರುವ 40,50 ರೂ ಹಣದಲ್ಲಿ ತನ್ನ ಜೀವನ ನಡೆಸುತ್ತಿದ್ದಾರೆ.
ಹೃದಯ ಶಸ್ತ್ರ ಚಿಕಿತ್ಸೆ ಒಳಗಾಗಿರುವ ಶಾಮಬಾಯಿ ದಿನಾಲು 5 ಗಂಟೆ ಕಾಲ ಸೇವೆ ಸಲ್ಲಿಸಿ ಶೌಚಾಲಯಕ್ಕೆ ಬೇಕಾದ ಕಸಬರಿಗೆ, ಫಿನಾಯಲ ಬಾಟಲ್,ಬೀಗದ ಕೈ, ಸ್ವಂತ ಖರ್ಚಿನಿಂದ ತಂದು ಈ ಶೌಚಾಲಯಕ್ಕೆ ಸ್ವಲ್ಪ ಜೀವ ನೀಡಿದ್ದಾಳೆ.
ಪುರಸಭೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಶಾಮಬಾಯಿ ಮನವಿ ಮಾಡಿದರು ಸಹ ಯಾವೊಬ್ಬ ಅಧಿಕಾರಿಯು ಇತ್ತ ಗಮನಹರಿಸದಿರುವುದು ದುರಂತದ ಸಂಗತಿಯಾಗಿದೆ. ಇನ್ನಾದರು ಪುರಸಭೆ ಅಧಿಕಾರಿಗಳು ಸಮಸ್ಯೆ ಬಗೆಹರಿಸಿ ಅನಾಥವಾಗಿರುವ ಶೌಚಾಲಯಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿದ ಶಾಮಬಾಯಿಗೆ ಆಸರೆಯಾಗಲಿದ್ದಾರಾ ಕಾದು ನೋಡಬೇಕಿದೆ.
Kshetra Samachara
30/09/2022 03:26 pm