ಬೆಳಗಾವಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ಹಾದು ಹೋಗಿರುವ ಗೋಟುರ ವಿಜಯಪುರ ರಸ್ತೆ ಕಳೆದ ಎರಡು ವರ್ಷದ ಹಿಂದೆಯಷ್ಟೇ ಮೇಲ್ದರ್ಜೆಗೆರಿಸಲಾಗಿದೆ.ಆದರೆ ಕಾಮಗಾರಿ ಮಾತ್ರ ನೆನೆಗುದ್ದಿಗೆ ಬಿದಿದ್ದು,ಕಾಟಾಚಾರಕ್ಕೆ ಎಂಬಂತೆ ಕಳೆದ 6 ತಿಂಗಳ ಹಿಂದೆ ರಸ್ತೆ ಡಾಂಬರಿಕರಣ ಮಾಡಲಾಗಿತ್ತು. ಆದರೆ ಈ ಕಳಪೆ ಕಾಮಗಾರಿ ಪರಿಣಾಮ ರಸ್ತೆ ಸಂಪೂರ್ಣವಾಗಿ ಹದೆಗಟ್ಟು ರಸ್ತೆ ಸಂಚಾರ ಇದೀಗ ಡಾಂಬರಿಕರಣ ಸಂಚಾರಗಳು ಯಮಯಾತನೆ ಅನುಭವಿಸಬೇಕಾಗಿದೆ.
ಹೌದು ಗೋಟುರ ಗ್ರಾಮದಿಂದ ಚಿಕ್ಕೋಡಿ ಮಾರ್ಗವಾಗಿ ವಿಜಯಪುರ ತಲುಪುವ ಈ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ಓಡಾಡುತ್ತವೆ.ಆದರೆ ಈ ರಸ್ತೆ ಮೇಲೆ ಓಡಾಟ ಕಷ್ಟಕರವಾಗಿದ್ದು ,ನಿತ್ಯ ವಾಹನ ಸವಾರರು ಜೀವ ಕೈಲಿಡಿದು ಓಡಾಡಬೇಕಾಗಿದೆ .
ರಾಜ್ಯ ಹೆದ್ದಾರಿ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆರಿಸಲಾಗಿದೆ.ಆದರೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಇನ್ನು ಮಂಜೂರಾತಿ ಸಿಗದೆ ಕಳೆದ ಎರಡು ವರ್ಷದಿಂದ ತಗ್ಗು ಗುಂಡಿಗಳಲ್ಲಿ ವಾಹನ ಸವಾರ ಪರದಾಟ ನಡೆಸಬೇಕಾಗಿದೆ.
ಕಳೆದ ಆರು ತಿಂಗಳ ಹಿಂದೆ ಕಾಮಗಾರಿ ಕೈಗೊಂಡು ಇರುವ ರಸ್ತೆ ಅಭಿವೃದ್ಧಿ ಕಾಮಗಾರಿ ಮಾಡಿದ್ದರು,ಆದರೆ ಕಳಪೆ ಕಾಮಗಾರಿ ಪರಿಣಾಮ ರಸ್ತೆ ಸಂಪೂರ್ಣವಾಗಿ ಹದಗೆಟ್ಟ ಜನರು ನಿತ್ಯ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ .
PublicNext
27/09/2022 02:19 pm