ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಸಾರ್ವಜನಿಕರ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಪಾದಯಾತ್ರೆ: ಕಾಂಗ್ರೆಸ್ ಮುಖಂಡನ ಜೊತೆ ಹೆಜ್ಜೆ ಹಾಕಿದ ಜನತೆ

ಬೆಳಗಾವಿ: ಜನಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸದ ಕಿತ್ತೂರು ತಹಶೀಲ್ದಾರ್ ಕಚೇರಿಯಲ್ಲಿ ಹಲವು ತೊಂದರೆಗಳನ್ನು ಸಾರ್ವಜನಿಕರು ಅನುಭವಿಸುತ್ತಿದ್ದಾರೆ ಎಂದು ಸಮಾಜ ಸೇವಕ,ಕಾಂಗ್ರೆಸ್ ಮುಖಂಡ ಹಬೀಬ ಶಿಲೇದಾರ ಆರೋಪಿಸಿದ್ರು. ಈ ಹಿನ್ನೆಲೆ ತಾಲೂಕಿನ ಕಡತನಾಳ ಗ್ರಾಮದಿಂದ ಕಿತ್ತೂರುವರೆಗೆ ಸುಮಾರು 18 ಕಿ.ಮೀ ಪಾದಯಾತ್ರೆ ಮಾಡಿ ಆಕ್ರೋಶ ಹೊರಹಾಕಿದ್ರು. ಪಾದಯಾತ್ರೆಯುದ್ದಕ್ಕೂ ಜನ ಸರ್ಕಾರ ಮತ್ತು ತಾಲೂಕಾಡಳಿತದ ವಿರುದ್ಧ ಘೋಷಣೆ ಕೂಗಿದರು.

ಇದೆ ವೇಳೆ ಮಾತನಾಡಿದ ಶಿಲೇದಾರ್, ಕಿತ್ತೂರಿನ ತಹಶೀಲ್ದಾರ್ ಕಚೇರಿ ವ್ಯಾಪ್ತಿಯಲ್ಲಿ ಸುಮಾರು 32 ಇಲಾಖೆಗಳು ಬರುತ್ತವೆ. ಒಂದೊಂದು ಇಲಾಖೆಗೆ ಜನರು ತಮ್ಮ ಕೆಲಸಗಳಿಗಾಗಿ ಹೋದರೆ ತಾಪತ್ರಯ ತಪ್ಪಿದ್ದಲ್ಲ. ಅತಿವೃಷ್ಟಿಯಿಂದ ಬಿದ್ದಿರುವ ಮನೆಗಳಿಗೆ ಸಮರ್ಪಕ ಪರಿಹಾರ ದೊರೆಯುತ್ತಿಲ್ಲ. ತಾಲೂಕಿನ ಈ ಎಲ್ಲ ಸಮಸ್ಯೆಗಳಿಗೆ ಕಾಲಮಿತಿಯೊಳಗೆ ಪರಿಹಾರ ಸಿಗದಿದ್ದರೆ ಹೋರಾಟ ಮಾಡಲಾಗುವುದು ಎಂದು ತಹಶೀಲ್ದಾರರಿಗೆ ವೇದಿಕೆಯ ಮೇಲೆ ಎಚ್ಚರಿಸಿದರು. ತದನಂತರ ತಹಶೀಲ್ದಾರ್ ಸೋಮಲಿಂಗಪ್ಪ ಹಾಲಗಿ ಅವರಿಗೆ ಹತ್ತಾರು ಹಳ್ಳಿಯ ಜನರು ಸಮಸ್ಯೆ ಬಗೆಹರಿಸುವಂತೆ ಮನವಿ ಕೂಡಾ ಮಾಡಿದ್ರು.

Edited By : Somashekar
PublicNext

PublicNext

12/10/2022 05:07 pm

Cinque Terre

26.53 K

Cinque Terre

0

ಸಂಬಂಧಿತ ಸುದ್ದಿ