ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಡಚಿ ಶಾಸಕರೆ ಸ್ವಲ್ಪ‌ ಗಮನಿಸಿ ಇತ್ತ ಕಡೆ !

ಅಥಣಿ: ಕುಡಚಿ ಶಾಸಕರೇ ನೀವು ನೋಡಲೇಬೇಕಾದ ಸ್ಟೋರಿ ಇದು. ನಿಮ್ಮದೇ ಕ್ಷೇತ್ರದ ಜನತೆಯ ಅಳಲು ನಿಮಗೆ ಕೇಳ್ತಿಲ್ವ..?

ಮೂಲಭೂತ ಸೌಕರ್ಯಗಳ ಕೊರತೆಯಿಂದ ಮುಗಳಖೋಡ ಗ್ರಾಮಸ್ಥರು ಪರದಾಡುತ್ತಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದೆ. ಆದರೂ ನಮ್ಮ ಭಾಗದ ಶಾಸಕ ಪಿ.ರಾಜೀವ ನಮ್ಮ ಕೈಗೆ ಸಿಗುತ್ತಿಲ್ಲ ಅಂತ ಅಳಲು ತೊಡಿಕೊಳ್ಳುತ್ತಿದ್ದಾರೆ. ಮುಗಳಖೋಡ ಪಟ್ಟಣದ ಮುಖ್ಯರಸ್ತೆಯಲ್ಲಿನ ಗುಂಡಿಗಳು ಬಲಿಗಾಗಿ ಕಾಯುತ್ತಿದೆ.

ಕಳೆದ ಆರು ತಿಂಗಳ ಹಿಂದೆ ನಿರ್ಮಾಣಗೊಂಡಿದ್ದ ರಸ್ತೆಯ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಮಳೆ ಆಗ್ತಿದ್ರೂ ಜೀವಜಲಕ್ಕಾಗಿ ಮುಗಳಖೋಡ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಪಟ್ಟಣದ ಜಲಕುಂಭಗಳು ಇದ್ದು ಇಲ್ಲದಂತಾಗಿವೆ. ಕೆಲಸಕ್ಕೆ ಬಾರದ ಪುರಸಭೆ ವಾಹನಗಳು. ಗಬ್ಬೆದ್ದು ನಾರುತ್ತಿರುವ ಮುಗಳಖೋಡ ಪಟ್ಟಣ ಸರಿಯಾದ ಒಳಚರಂಡಿ ವ್ಯವಸ್ಥೆ ಇಲ್ಲದೇ ಕೊಳಗೇರಿಯಂತಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

Edited By : Somashekar
PublicNext

PublicNext

02/10/2022 06:17 pm

Cinque Terre

32.13 K

Cinque Terre

1

ಸಂಬಂಧಿತ ಸುದ್ದಿ