ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಲವು ಬಾರಿ ಮನವಿ ಸಲ್ಲಿಸಿದರೂ ಕ್ಯಾರೇ ಎನ್ನದ ಅಧಿಕಾರಿಗಳು

ಖಾನಾಪೂರ : ಖಾನಾಪುರ ತಾಲೂಕಿನ ಗುಂಡೇನಟ್ಟಿ ಗ್ರಾಮದಿಂದ ಇಟಗಿ ಕ್ರಾಸ್ ಸಂಪರ್ಕಿಸುವ ಮಾರ್ಗವು ಸಂಪೂರ್ಣ ಹದಗೆಟ್ಟಿದ್ದು ಇದರ ಬಗ್ಗೆ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಕೂಡ ಇತ್ತ ಕಡೆ ಗಮನ ಹರಿಸುತ್ತಿಲ್ಲ.

ಇನ್ನಾದರೂ ಇತ್ತ ಕಡೆ ಗಮನಹರಿಸಿ ಇಲ್ಲವಾದಲ್ಲಿ ನಾವು ರಸ್ತೆಗಿಳಿದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಅಲ್ಲಿನ ನಿವಾಸಿಗಳು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಗುಂಡೇನಟ್ಟಿ ಗ್ರಾಮದ ವಿಠ್ಠಲ ಹಿಂಡಲಕರ, ಪ್ರಕಾಶ ಬಡಿಗೇರ , ಬಸವರಾಜ ತಳವಾರ, ಮಂಜು ತಿಗಡಿ, ಸಂಜು ಹರಿಜನ್, ಅದ್ರುಶ್ಯ ಗುಪ್ಪನ್ನಿ , ಮುಂತಾದವರು ಉಪಸ್ಥಿತರಿದ್ದರು.

Edited By : Somashekar
Kshetra Samachara

Kshetra Samachara

25/09/2022 11:29 am

Cinque Terre

19.64 K

Cinque Terre

0

ಸಂಬಂಧಿತ ಸುದ್ದಿ