ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ : ಸೇವಾನಿರತ ಹುಕ್ಕೇರಿ ಯೋಧ ಹೃದಯಾಘಾತದಿಂದ ಸಾವು

ಬೆಳಗಾವಿ: ಜಿಲ್ಲೆ ಹುಕ್ಕೇರಿ ತಾಲೂಕಿನ ಬಡಕುಂದ್ರಿ ಗ್ರಾಮದ ಕರ್ತವ್ಯ ನಿರತ ಯೋಧ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಬಡಕುಂದ್ರಿ ಗ್ರಾಮದ 42 ವರ್ಷದ ಶಿವಾನಂದ ಬಾಬು ಶಿರಗಾಂವಿ ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೃತ ಯೋಧ ಜಮ್ಮು ಕಾಶ್ಮೀರಿನ ಶ್ರೀ ನಗರದ 55 RR ಬೆಟಾಲಿಯನ್ ದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಯೋಧ ತಾಯಿ, ಹೆಂಡತಿ ಹಾಗೂ ಇಬ್ಬರು ಪುತ್ರರನ್ನ ಅಗಲಿದ್ದು, ಇಂದು ಸಂಜೆ ಅಥವಾ ಶನಿವಾರ ಬೆಳಿಗ್ಗೆ ಯೋಧನ ಮೃತದೇಹ ಸ್ವಗ್ರಾಮಕ್ಕೆ ಬರುವ ಸಾಧ್ಯತೆ ಇದ್ದು ಸಾವಿರಾರು ಜನ ಸೇರಬಹುದು ಎಂದು ತಿಳಿದು ಬಂದಿದೆ.

Edited By : Abhishek Kamoji
Kshetra Samachara

Kshetra Samachara

07/10/2022 09:41 am

Cinque Terre

16.02 K

Cinque Terre

0

ಸಂಬಂಧಿತ ಸುದ್ದಿ